Gicchi Gili Gili : ಗಿಚ್ಚಿ ಗಿಲಿಗಿಲಿ ಶೋಗೆ ಬಂದ್ರು ಹೊಸ ನಿರೂಪಕಿ! ನಿರಂಜನ್ ದೇಶಪಾಂಡೆ ಸ್ಥಾನಕ್ಕೆ ಬಂದ ಆ ಬ್ಯೂಟಿ ಯಾರು ಗೊತ್ತೇ?

Gicchi Gili Gili : ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿಗಳ ಪಟ್ಟಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯೂ ಕೂಡಾ ಒಂದು. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿಭಿನ್ನ ಹಾಸ್ಯ ಕಾರ್ಯಕ್ರಮ ಗಿಚ್ಚಿ ಗಿಲಿಗಿಲಿ ಪತ್ರಿ ವೀಕೆಂಡ್​​​ ಪ್ರೇಕ್ಷಕರನ್ನ ರಂಜಿಸಲು ಭಿನ್ನ ವಿಭಿನ್ನ ರೀತಿಯ ಸ್ಕಿಟ್​ಗಳ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿದೆ.

ಇನ್ನು ಕಳೆದ ವಾರ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗಿದ್ದ ಗಿಚ್ಚಿಗಿಲಿಗಿಲಿ (Gicchi Gili Gili ) ಶೋನಲ್ಲಿ ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 5ರ ಖ್ಯಾತಿಯ ನಿವೇದಿತಾ ಗೌಡ ಆಯಂಕರ್​​ ರೀತಿಯಲ್ಲಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media ) ವೈರಲ್​ ಆಗಿದೆ.

ಹೌದು ಗಿಚ್ಚಿ ಗಿಲಿಗಿಲಿ ಶೋನಲ್ಲಿ ಕಂಟೆಸ್ಟೆಂಟ್ಸ್ ಆಗಿದ್ದ ನಿವೇದಿತಾ ಗೌಡ ನನಗೆ ಜಾಸ್ತಿ ಸ್ಕಿಟ್​​ ಕೊಡೋದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಟಿ ಶೃತಿ ಅವರು ನಿವೇದಿತಾ ಗೌಡಗೆ ಒಂದು ವಿಚಿತ್ರ ಚಾನ್ಸ್​​ ನೀಡಿದರು .

ಅದೇನೆಂದರೆ? ಆಯಂಕರಿಂಗ್​​ ಪಟ್ಟ. ಅಂತೆಯೇ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಶೋ ನಿರೂಪಕರಾಗಿದ್ದ ನಿರಂಜನ ದೇಶಪಾಂಡೆ ಅವರ ಹಾಗೆ ​​ಎಂಟ್ರಿ ಕೊಟ್ಟು ಜಡ್ಜಸ್​​​ಗೆ ವೆಲ್‌ಕಮ್ ಮಾಡಿದ್ದಾರೆ. ಸದ್ಯ ನಿವೇದಿತಾ ಗೌಡ ಆಯಂಕರಿಂಗ್​​ ಮಾಡಿರೋ ವಿಡಿಯೋವನ್ನು ಕಲರ್ಸ್​ ಕನ್ನಡ ಇನ್​​ಸ್ಟಾಗ್ರಾಮ್​​ ಅಫಿಶಿಯಲ್​ ಪೇಜ್​​ನಲ್ಲಿ ಶೇರ್​ ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಒಟ್ಟಿನಲ್ಲಿ ಟಿಕ್​ ಟಾಕ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಎಲ್ಲಿಗೆ ಹೋದರೂ, ಬಂದರೂ ಸಹ ರೀಲ್ಸ್ ಮಾಡುತ್ತಾರೆ. ಅವರು ಒಂದು ಯೂಟ್ಯೂಬ್ (YouTube ) ಚಾನೆಲ್ ಕೂಡ ಮಾಡಿಕೊಂಡಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ಒಟ್ಟಾರೆಯಾಗಿ ಅವರು ಎಲ್ಲಾ ಕಡೆ ಫೇಮಸ್​. ನಿವೇದಿತಾ ಕಿರುತೆರೆಯಲ್ಲಿ ಕೂಡಾ ಬ್ಯುಸಿ ಇರುವ ನಟಿ. ಸದ್ಯ ಬಿಗ್​ಬಾಸ್​ ನಂತರ ಫೇಮಸ್​ ಆದ ನಿವೇದಿತಾ, ರಾಜಾ-ರಾಣಿ ಶೋನಲ್ಲಿ ಜನರಿಗೆ ಮನರಂಜನೆ ನೀಡಿದ್ದರು. ಈಗ ಗಿಚ್ಚಿಗಿಲಿ ಗಿಲಿ ಶೋ ಮೂಲಕ ಕಾಮಿಡಿ ಮಾಡುತ್ತಿದ್ದು, ಅಲ್ಲೂ ಸಹ ಅವರದ್ದೇ ಹವಾ ಎನ್ನಬಹುದು.

Leave A Reply

Your email address will not be published.