ಮಂಗಳೂರು: ಕಾರು ಶೋರೂಂ ಆವರಣದೊಳಗೆ ಹಾಡುಹಗಲೇ ಕಾಡುಹಂದಿಯೊಂದು ನುಗ್ಗಿ ಒಬ್ಬನಿಗೆ ತಿವಿಯಲು ಯತ್ನಿಸಿ ಆತಂಕ ಸೃಷ್ಟಿಸಿದ ಘಟನೆ ನಗರದ ಪಡೀಲ್ ರೈಲ್ವೇ ಬ್ರಿಡ್ಜ್ ಸಮೀಪ ಇರುವ ಕಾರ್ ಶೋರೂಂ ನ ಆವರಣದಲ್ಲಿ ನಡೆದಿದೆ.
Sponsoredಈ ಘಟನೆ ಕಳೆದ ಬುಧವಾರ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳು ಸದ್ಯ ವೈರಲ್ ಆಗುತ್ತಿದೆ.ಶೋರೂಂ ಆವರಣಕ್ಕೆ ಹೆದ್ದಾರಿ ದಾಟಿ ಮುಖ್ಯದ್ವಾರದಲ್ಲೇ ಓಡಿಬಂದು ಕಾಡುಹಂದಿ ನುಗ್ಗಿದ್ದು,ಎರಡೆರಡು ಬಾರಿ ಒಡಾಡಿದೆ.
Marriage AdSponsoredಅಲ್ಲಿದ್ದ ಜನ ದಿಕ್ಕಾಪಾಲಾಗಿ ಓಡಿದ್ದಾರೆ.ಕಾರ್ ಶೋರೂಂ ನ ಅಲ್ಲೇ ಆವರಣದಲ್ಲಿದ್ದ ಓರ್ವನ ಹಿಂದೆಯೇ ಓಡಿ ತಿವಿಯಲು ಯತ್ನಿಸಿದೆ.ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. ಕೆಲ ಸಮಯದ ಬಳಿಕ ಕಾಡು ಹಂದಿ ರಸ್ತೆ ದಾಟಿ ಪಕ್ಕದ ಕಾಡಿನ ಕಡೆಗೆ ಓಡಿ ಹೋಗಿದೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.




