ಶನಿವಾರ, 24 ಅಕ್ಟೋಬರ್ 2026

ಸವಣೂರು : ಎರಡು ಕಾರು- ಬೈಕ್ ನಡುವೆ ಸರಣಿ ಅಪಘಾತ

ಸವಣೂರು: ಎರಡು ಕಾರು ಹಾಗೂ ಬೈಕ್ ನ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಸವಣೂರಿನಲ್ಲಿ ನ.11 ರಂದು ನಡೆದಿದೆ. ಬೈಕ್, ಸ್ವಿಫ್ಟ್ ಕಾರು ಹಾಗೂ ಆಲ್ಲೋ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ.

ಸವಣೂರು ಕಡೆಯಿಂದ ಕಾಣಿಯೂರು ಕಡೆ ತೆರಳುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಕಾಣಿಯೂರು ಕಡೆಯಿಂದ ಸವಣೂರು ಕಡೆ ಬರುತ್ತಿದ್ದ ಬೈಕ್ ಗೆ ಮತ್ತು ಆಲ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದು ಘಟನೆಯಿಂದ ಬೈಕ್ ಸವಾರ ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ