ಕಾಣಿಯೂರು: ಕೆಲದಿನಗಳ ಹಿಂದೆ ಕಾರೊಂದು ಸೇತುವೆಗೆ ಡಿಕ್ಕಿಯಾಗಿ ಹೊಳೆಗೆ ಬಿದ್ದು ಇಬ್ಬರು ಸಾವಿಗೀಡಾದ ಪರಿಸರದಲ್ಲಿರುವ ಬೈತಡ್ಕ ಜುಮಾ ಮಸೀದಿಯ ಬಳಿ ಕಳೆದ ಎರಡು ದಿನಗಳ ಹಿಂದೆ ಅನುಮಾನಾಸ್ಪದ ವ್ಯಕ್ತಿ ಯೊಬ್ಬ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.
Sponsoredಈ ಬಗ್ಗೆ ಜುಮ್ಮಾ ಮಸೀದಿ ದರ್ಗಾ ಶರೀಫ್ ಬೈತಡ್ಕ ಆಡಳಿತ ಸಮಿತಿ ವತಿಯಿಂದ ಆ ವ್ಯಕ್ತಿಯನ್ನು ವಿಚಾರಣೆ ನಡೆಸುವಂತೆ ಬೆಳ್ಳಾರೆ ಆರಕ್ಷಕ ಠಾಣಾಧಿಕಾರಿ ರುಕ್ಮ ನಾಯ್ಕ್ ಅವರಿಗೆ ದೂರು ನೀಡಲಾಗಿದೆ.
ಈ ಸಂದರ್ಭದಲ್ಲಿ ಬೈತಡ್ಕ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ,ಉಪಾಧ್ಯಕ್ಷರಾದ ಇಕ್ಬಾಲ್ ಬೈತಡ್ಕ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಅಲೆಕ್ಕಾಡಿ,ಜೊತೆ ಕಾರ್ಯದರ್ಶಿ ಅಬ್ದುಲ್ಲ ಕೆಲಂಬಿರಿ ಕೋಶಾಧಿಕಾರಿ ಸಾಬು ಹಾಜಿ,ಸಮಿತಿ ಸದಸ್ಯರಾದ ಮೊಹಮ್ಮದ್ ಅಲೆಕ್ಕಾಡಿ,ಅಬ್ದುರ್ರಹ್ಮಾನ್ ಸಮಹಾದಿ ಉಪಸ್ಥಿತರಿದ್ದರು.




