Rajkumar

ಡಾ. ರಾಜಕುಮಾರ್ ಕಂಚಿನ ಪುತ್ಥಳಿಯ ಮೇಲೆ ಕಳ್ಳರ ಕಣ್ಣು!! ಉದ್ಯಾನವನದಲ್ಲಿದ್ದ ಪ್ರತಿಮೆಯನ್ನು ಕಳ್ಳತನಗೈದ ಬಗ್ಗೆ ಪ್ರಕರಣ ದಾಖಲು-ಶಂಕಿತರು ವಶಕ್ಕೆ

ಬೆಂಗಳೂರು:ನಗರದ ಲುಂಬಿನಿ ಗಾರ್ಡನ್ ನಲ್ಲಿ ಸ್ಥಾಪಿಸಲಾಗಿದ್ದ ವರನಟ, ಡಾ. ರಾಜಕುಮಾರ್ ಅವರ ಪುತ್ಥಳಿಯನ್ನು ಕಳ್ಳರು ಎಗರಿಸಿದ್ದಾರೆ. ಡಾ. ರಾಜ್ ಅವರ ನೆನಪಿಗಾಗಿ ಸ್ಥಾಪಿಸಲಾಗಿದ್ದ ಕಂಚಿನ ಪುತ್ಥಳಿ ಕಳ್ಳತನದ ಬಗ್ಗೆ ಅರಣ್ಯಾಧಿಕಾರಿಯೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ವೈಕುಂಠದಲ್ಲಿ ಅಣ್ಣಾವ್ರ ಜೊತೆ ‘ಅಪ್ಪು’ ಕಣ್ಣಾಮುಚ್ಚಾಲೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಫೋಟೋ

ದೊಡ್ಮನೆ ಮಗನಾಗಿ, ಸ್ವಚ್ಛ ಸಿನಿಮಾಗಳ ನಟನಾಗಿ, ದುರ್ಬಲರ ಜೀವನದ ಆಶಾಕಿರಣವಾಗಿ ಬಾಳಿ ಬದುಕಿ ಸಾಧಿಸಿ ಇದೀಗ ಎಳೆ ವಯಸ್ಸಿನಲ್ಲೇ ಕಣ್ಮರೆಯಾಗಿ ಹೋಗಿದ್ದಾರೆ ಪುನೀತ್‌ ರಾಜ್‌ಕುಮಾರ್. ನಟನ ಸಾವು ಇಡೀ ಚಿತ್ರರಂಗ, ಕುಟುಂಬ, ಅಭಿಮಾನಿಗಳನ್ನು ಕಂಗಾಲಾಗಿಸಿದೆ. ಇದನ್ನು ಅಪ್ಪು ಅಭಿಮಾನಿಗಳು ಇಂದಿಗೂ ನಂಬಲು ಸಿದ್ಧರಿಲ್ಲ. ಅವರ ಸ್ವಚ್ಛ ನಗು, ತಿಳಿಯುವ ತುಡಿತದ ಕಣ್ಣುಗಳು, ಪುಟ್ಟ ಮಗುವಿನ ಹಾಗೇ ನಾಚಿ ನೀರಾಗುವ ವಿನಯ,ಅಪ್ಪು ನೆನಪುಕ್ಕಿಸುವ ಇಂತಹ ಹಲವು ವಿಷಯಗಳು ಸದಾ ಕಣ್ಣುಮುಂದೆ ಇರುತ್ತದೆ. ನೆನೆದಷ್ಟು ನೂರ್ಮಡಿಯಾಗುತ್ತಿರುವ ಅಪ್ಪು ಈಗ ನೆನಪು …

ವೈಕುಂಠದಲ್ಲಿ ಅಣ್ಣಾವ್ರ ಜೊತೆ ‘ಅಪ್ಪು’ ಕಣ್ಣಾಮುಚ್ಚಾಲೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಫೋಟೋ Read More »

error: Content is protected !!
Scroll to Top