ಮಂಗಳವಾರ, 27 ಅಕ್ಟೋಬರ್ 2026
Trending

Harish Poonja met Soujanya mother and invites for Protest

latest

ಧರ್ಮಸ್ಥಳ ಸೌಜನ್ಯಳ ಪಾಂಗಾಳ ಮನೆಗೆ ಬೆಳ್ತಂಗಡಿ ಶಾಸಕ ಪೂಂಜಾ ಭೇಟಿ, ಆಹ್ವಾನ | ಆ.27 ರ ಬಿಜೆಪಿಯ ಸಭೆಗೆ ತಾಯಿ ಕುಸುಮಾವತಿ, ತಿಮರೋಡಿ ಬರ್ತಾರಾ?; ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಭಾಗಿ ಆಗ್ತಾರಾ?!

ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಕೆಲ ಬಿಜೆಪಿ ಮುಖಂಡರುಗಳು ಸೌಜನ್ಯರ ತಾಯಿ ಕುಸುಮಾವತಿ ಅವರನ್ನು ಭೇಟಿಯಾಗಿದ್ದಾರೆ. ಇವತ್ತು ಆಗಸ್ಟ್ 24 ರಂದು ದಿವಂಗತ ಸೌಜನ್ಯ ಗೌಡರ ಪಾಂಗಾಳದ ಮನೆಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕುಟುಂಬದ ಜೊತೆ ಮಾತುಕತೆ ನಡೆಸಿದರು. ಸೌಜನ್ಯ ಬಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಭೇಟಿ ಕುತೂಹಲ ಕೆರಳಿಸಿದೆ. Harish Poonja met Soujanya mother and invites for Protest