ಸೋಮವಾರ, 26 ಅಕ್ಟೋಬರ್ 2026
Trending

Traffic Police: ಟ್ರಾಫಿಕ್ ನಿಯಮ ಉಲ್ಲಂಘನೆ : ವ್ಯಕ್ತಿಯಿಂದ ₹49,100 ದಂಡ ವಸೂಲಿ ಮಾಡಿದ ಬೆಂಗಳೂರು ಪೊಲೀಸರು

ಟ್ರಾಫಿಕ್ ದಂಡವನ್ನು ತಪ್ಪಿಸುವವರ ಮೇಲೆ ಕಠಿಣ ಕ್ರಮ ಜರುಗಿಸುತ್ತಿರುವ ಬೆಂಗಳೂರು ಪೊಲೀಸರು, ₹49,100 ದಂಡವನ್ನು ಬಾಕಿ ಉಳಿಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಯಲಹಂಕ ವ್ಯಾಪ್ತಿಯ ಸಂಚಾರ ಪೊಲೀಸರು ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ, ದೀರ್ಘಕಾಲದಿಂದ ಬಾಕಿಯಿದ್ದ ಸಂಚಾರ ದಂಡವನ್ನು ಪಾವತಿಸುವಂತೆ ಮಾಡಿದ್ದಾರೆ.

Sponsored

ಇದನ್ನೂ ಓದಿ: Deady Accident: ಗಂಗಾನದಿಗೆ ಪುಣ್ಯಸ್ನಾಕ್ಕೆಂದು ಟ್ರ್ಯಾಕ್ಟರ್‌ನಲ್ಲಿ ತೆರಳಿದ್ದ ಭಕ್ತರ ಪಾಲಿಗೆ ಘೋರ ದುರಂತ; ಟ್ರ್ಯಾಕ್ಟರ್‌ ಕೆರೆಗೆ ಬಿದ್ದು, 7 ಮಕ್ಕಳು ಸೇರಿ 15 ಮಂದಿ ಸಾವು

Advertisement

https://twitter.com/DCPTrNorthBCP/status/1761025200815280431?t=pLFyf0-KuYGQ63xCxcy2tg&s=19

“ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಇಂದು ನಾವು KA.50-S-3579 ವಾಹನದ ಮಾಲೀಕರಿಂದ 49,100/- ದಂಡ ಸಂಗ್ರಹಿಸಲಾಗಿದೆ” ಎಂದು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು (ಉತ್ತರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿ ದೀರ್ಘಕಾಲದಿಂದ ಬಾಕಿ ಇರುವ ಸಂಚಾರ ದಂಡವನ್ನು ಪಾವತಿಸದೆ ಪಲಾಯನ ಮಾಡುತ್ತಿರುವ ಉಲ್ಲಂಘನೆಗಾರರನ್ನು ಬೆಂಗಳೂರು ಪೊಲೀಸರು ಬಂಧಿಸುತ್ತಿರುವುದು ಇದೇ ಮೊದಲಲ್ಲ. ಅಂತಹ ಅಪರಾಧಿಗಳನ್ನು ಬಂಧಿಸುವ ಅಭಿಯಾನವು ನಗರದ ಎಲ್ಲಾ ಭಾಗಗಳಲ್ಲಿ ನಡೆಯುತ್ತಿದೆ. ದಂಡವನ್ನು ಪಾವತಿಸುವಂತೆ ಪೊಲೀಸರು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಹೀಗೆ ನೀವು ಉಲ್ಲಂಘಿಸುವವರಿಗೆ ಹಲವಾರು ನೋಟಿಸ್ಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ ಅನೇಕ ವಾಹನಗಳಿಗೆ ₹ 50,000 ಕ್ಕಿಂತ ಹೆಚ್ಚು ದಂಡವನ್ನು ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.