ಶನಿವಾರ, 24 ಅಕ್ಟೋಬರ್ 2026

Liquor : ಸಿದ್ದು ಸರ್ಕಾರದಿಂದ ಮತ್ತೆ ಮದ್ಯ ದರ ಏರಿಕೆ – ಇನ್ಮುಂದೆ ಬಾಟಲ್ ಓಪನ್ ಸುಲಭವಲ್ಲ!!

Liquor : ಗ್ಯಾರೆಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಇದೀಗ ಆದಾಯದ ಮೂಲಗಳನ್ನು ಅರಸುತ್ತಿದೆ. ಹೀಗಾಗಿ ನಾಳೆ ಬಜೆಟ್ ಮಂಡಿಸಲಿರುವ ರಾಜ್ಯ ಸರ್ಕಾರವು ಮದ್ಯದ ದರವನ್ನು ಏರಿಕೆ ಮಾಡಲು ಚಿಂತನೆ ನಡೆಸಿದೆ.

ಯಸ್, ಅಬಕಾರಿ ಇಲಾಖೆ ಆದಾಯ ಸಂಗ್ರಹಣೆ ಗುರಿಯನ್ನು ಶೇ. 10ರಷ್ಟು ಹೆಚ್ಚಿಸಲು ಮುಂದಾಗಿದ್ದು, ರಾಜ್ಯದ ಮದ್ಯಪ್ರಿಯರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಭರ್ಜರಿ ಶಾಕ್‌ ನೀಡಲು ಸಜ್ಜಾಗಿದೆ. ನಾಳೆ ಮಾರ್ಚ್‌ 6ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಮದ್ಯದ ದರವನ್ನು ಮತ್ತೆ ಏರಿಕೆ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಸರ್ಕಾರ ನೀಡಿರುವ ಕಠಿಣ ಟಾರ್ಗೆಟ್‌ ರೀಚ್‌ ಆಗಲು ಅಬಕಾರಿ ಇಲಾಖೆಯು ಮದ್ಯ ದರ ಪರಿಷ್ಕರಣೆಗೆ ಈಗಾಗಲೇ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ಬಜೆಟ್‌ನಲ್ಲಿಯೂ ಬೆಲೆ ಏರಿಕೆ ಮಾಡಲಾಗಿತ್ತು, ಆದರೂ ಆದಾಯದ ಕೊರತೆ ನೀಗಿಸಲು ಈಗ ಮತ್ತೆ ಎರಡನೇ ಬಾರಿ ಬರೆ ಹಾಕಲು ಸರ್ಕಾರ ಮುಂದಾಗಿದೆ. ಮಾರ್ಚ್‌ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ. 

ಒಂದು ವೇಳೆ ಸರ್ಕಾರ ನಿರ್ಧರಿಸಿದಂತೆ ಮದ್ಯದ ದರ ಏರಿಕೆಯಾದರೆ ಕಡಿಮೆ ಬೆಲೆಯ ಮದ್ಯದ ಬಾಟಲಿಗಳ ದರದಲ್ಲಿ ₹10 ರಿಂದ ₹20 ಹಾಗೂ ಪ್ರೀಮಿಯಂ ಮದ್ಯದ ಮೇಲೆ ₹50 ರಿಂದ ₹100 ರವರೆಗೆ ಏರಿಕೆಯಾಗಬಹುದು.