ಭಾನುವಾರ, 25 ಅಕ್ಟೋಬರ್ 2026
Trending

ರಾಮ ಮತ್ತು ಮೋದಿಯನ್ನು ಬಯ್ಯೋದೇ ನಿಮ್ಮ ಹೋರಾಟ – ಮೋದಿ ಬೆನ್ನಿಗೆ ನಿಂತ ಪಾಕ್ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ!!

ಕಳೆದ ಮೂರು ದಿನಗಳಿಂದಲೂ ದೆಹಲಿಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ದೇಶದ ಪ್ರಮುಖ ಪ್ರತಿ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಪಡೆದೆ ತೀರುತ್ತೇವೆ ಎಂದು ಪಣತೊಟ್ಟಿವೆ. ಇದರ ಹೊರತಾಗಿಯೂ ದೇಶದ ಅನೇಕ ಸೆಲೆಬ್ರಿಟಿಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಆಟಗಾರ ಒಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಕ್ಕೆ ನಿಂತಿದ್ದಾರೆ.

Sponsored

ಹೌದು, ಕೇಂದ್ರದ ನಿಲುವಿನ ಬಗ್ಗೆ ಭಾರಿ ಆಕ್ರೋಶಗಳು ಕೇಳಿಬರುತ್ತಿರುವ ನಡುವೆಯೇ ಪಾಕಿಸ್ತಾನ ಕ್ರಿಕೆಟಿಗ ಡ್ಯಾನಿಶ್​ ಕನೇರಿಯಾ ಮೋದಿ ಪರ ಧ್ವನಿ ಎತ್ತಿದ್ದಾರೆ.

ಸಿಜೆಪಿ ಬೃಹತ್​ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಿದ್ದು, ಸಂಸತ್ತಿನ ಮುಂದೆ ನಿರಂತರವಾಗಿ ಧರಣಿ ನಡೆಸುತ್ತಿದೆ. ದೇಶಾದ್ಯಂತ ವಿರೋಧ ಪಕ್ಷಗಳು, ಈ ಪ್ರತಿಭಟನೆಗಳಲ್ಲಿ ಭಾಗಿಯಾಗುವ ಮೂಲಕ ಗೃಹ ಸಚಿವ ಅಮಿತ್ ಶಾ ಮತ್ತು ಧರ್ಮೇಂದ್ರ ಅವರ ರಾಜೀನಾಮೆ ಪಟ್ಟು ಹಿಡಿದಿವೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದ ಡ್ಯಾನಿಶ್ ಕನೇರಿಯಾ, ಈ ಪ್ರತಿಭಟನೆಗಳನ್ನು ವಿರೋಧಿಸಿ ಒಂದಷ್ಟು ವಿವಾದಾತ್ಮಕ ಹೇಳಿಕೆಗಳನ್ನೇ ಹರಿಬಿಟ್ಟಿದ್ದಾರೆ.

ಭಾರತದಲ್ಲಿ ಪ್ರತಿ ಪ್ರತಿಭಟನೆಗೂ ಒಂದೇ ಸ್ಕ್ರಿಪ್ಟ್​ ಇದೆ. ವಿದ್ಯಾರ್ಥಿಗಳ ಹೋರಾಟದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪ್ರತಿಭಟನೆ ಕೇವಲ ರಾಮ ಮತ್ತು ಮೋದಿಯನ್ನು ಶಪಿಸುವುದಕ್ಕೆ ಏಕೆ ಮಾಡಲಾಗುತ್ತಿದೆ? ಪ್ರತಿಭಟನೆಗಳು ನಡೆದಾಗಲೆಲ್ಲಾ ಅವರು ಶ್ರೀರಾಮ, ಭಾರತ ಮಾತೆ, ಹಿಂದೂ ಧರ್ಮ, ಮೋದಿ ಮತ್ತು ಅವರ ತಾಯಿಯನ್ನು ಮುನ್ನೆಲೆಗೆ ತರುತ್ತಾರೆ. ಘರ್ಷಣೆಗಳು ನಡೆದಾಗ ಅಲ್ಲಿ ಚರ್ಚೆಯೂ ಇಲ್ಲ, ಪರಿಹಾರವೂ ಆಗಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಭಾರತದಲ್ಲಿ ಘೋಷವಾಕ್ಯ, ನಿಂದನೆ, ಅವ್ಯವಸ್ಥೆಗಳೇ ಕಾಣುತ್ತಿವೆ. ಇವರೆಲ್ಲ ಭಾರತವನ್ನು ನೇಪಾಳದಂತಹ ಪರಿಸ್ಥಿತಿಗೆ ದೂಡಲು ಯತ್ನಿಸುತ್ತಿದ್ದಾರೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೊದಲು ಕೆಲವು ರೈತರು ದೆಹಲಿಯನ್ನು ಏಕೆ ತಡೆಯಲು ಹೊರಟಿದ್ದರು? ಇದೊಂದು ಸರ್ಕಸ್ ಆಗಿ ಬದಲಾಗುತ್ತಿದೆ ಅಷ್ಟೇ ಎಂದು ಅವರು ಕಿಡಿಕಾರಿದ್ದಾರೆ. ಸದ್ಯ ಡ್ಯಾನಿಶ್​ರ ಕಾಮೆಂಟ್‌ಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ.