ಮಂಗಳವಾರ, 27 ಅಕ್ಟೋಬರ್ 2026
Trending

MP: ಚಲಿಸುತ್ತಿದ್ದ ಆಂಬ್ಯುಲೆನ್ಸ್’ನಲ್ಲೇ ಇಬ್ಬರು ಯುವಕರೊಂದಿಗೆ ಯುವತಿಯ ರಾಸಲೀಲೆ- 5 ಕಿ.ಮೀ ಚೇಸ್ ಮಾಡಿ ಹಿಡಿದ ಜನ !! Video Viral

MP: ಚಲಿಸುತ್ತಿದ್ದ ಆಂಬ್ಯುಲೆನ್ಸ್ ಒಳಗೆ ಯುವತಿ ಮತ್ತು ಇಬ್ಬರು ಯುವಕರು ಆಕ್ಷೇಪಾರ್ಹ ಚಟುವಟಿಕೆಗಳಲ್ಲಿ ತೊಡಗಿದ್ದ ಘಟನೆ ಮಧ್ಯಾಪ್ರದೇಶದ ಛತ್ತರ್‌ಪುರದಲ್ಲಿ ಇಂದು ಬೆಳಕಿಗೆ ಬಂದಿದೆ.

Sponsored

ರಸ್ತೆಯಲ್ಲಿ ಆಂಬುಲೆನ್ಸ್ ಚಲಿಸುತ್ತಿದ್ದ ವೇಳೆ, ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಆಂಬ್ಯುಲೆನ್ಸ್ ಒಳಗಿನ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ್ದಾರೆ. ಆಗ ಕಿಟಕಿಯ ಮೂಲಕ ಇಣುಕಿ ನೋಡಿದಾಗ ಒಳಗಡೆ ನಡೆಯುತ್ತಿದ್ದ ರಾಸಲೀಲೆ ಕಂಡು ಬಂದಿದೆ.

Advertisement
Advertisement

ಇದನ್ನು ಗಮನಿಸಿದ ವ್ಯಕ್ತಿಯು ಅಲ್ಲೇ ಸುತ್ತಮುತ್ತಲಿದ್ದ ಸಾರ್ವಜನಿಕರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಆಂಬ್ಯುಲೆನ್ಸ್ ಕಿಟಕಿಯಲ್ಲಿನ ದೃಶ್ಯ ಕಂಡು ಅನುಮಾನಗೊಂಡ ಸಾರ್ವಜನಿಕರು ಸುಮಾರು 5 ಕಿಲೋಮೀಟರ್‌ಗಳವರೆಗೆ ಅದನ್ನು ಬೆನ್ನಟ್ಟಿದ್ದಾರೆ. ಕೊನೆಗೆ ಅದನ್ನು ನಿಲ್ಲಿಸಿದಾಗ ಒಳಗೆ ಒಬ್ಬ ಯುವತಿ ಮತ್ತು ಇಬ್ಬರು ಯುವಕರು ಪತ್ತೆಯಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿಯೂ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ಆ ವ್ಯಕ್ತಿ ಪಕ್ಕದಲ್ಲಿ ಹೋಗುತ್ತಿದ್ದ ಮತ್ತೊಂದು ಕಾರಿನವರ ಸಹಾಯವನ್ನು ಕೇಳುತ್ತಿರುವುದು ಮತ್ತು ಮಧ್ಯಪ್ರವೇಶಿಸುವಂತೆ ವಿನಂತಿಸುತ್ತಿರುವುದು ದಾಖಲಾಗಿದೆ. ಕೊನೆಗೆ ಆಂಬ್ಯುಲೆನ್ಸ್ ಚಾಲಕನನ್ನು ಪ್ರಶ್ನಿಸಿದಾಗ, ಆತ “ಆಕೆ ನಮ್ಮ ಸಹೋದರಿ” ಎಂದು ಉತ್ತರಿಸಿದ್ದಾನೆ. ಆದರೆ, ವಾಹನ ನಿಲ್ಲಿಸಲು ಹೇಳಿದಾಗ ಅಷ್ಟು ವೇಗವಾಗಿ ಏಕೆ ಚಲಾಯಿಸುತ್ತಿದ್ದಿರಿ ಎಂದು ಪ್ರಶ್ನಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನೂ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ಬಳಸುವ ವಾಹನದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದನ್ನು ಕಂಡು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನೆಯ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.

Video 👇

https://x.com/i/status/2047109273256333634

Advertisement