ಶನಿವಾರ, 24 ಅಕ್ಟೋಬರ್ 2026

ಯುವ ಸಂಶೋಧಕ ದೀಪಕ್ ಎ ಸ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ

ಯುವ ಸಂಶೋಧಕ ದೀಪಕ್ ಎ ಸ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆಯ ಇ-ಪುಸ್ತಕ ಇದೀಗ ಉನ್ನತ ಗುಣಮಟ್ಟದ heyzine ಡಿಜಿಟಲ್ ಫ್ಲಿಪ್‌ಬುಕ್ ರೂಪದಲ್ಲಿ ಪ್ರಕಟ

ಮಂಗಳೂರು: ಕರ್ನಾಟಕದ ಮಹತ್ವಕಾಂಕ್ಷಿ ಯುವ ವಿಜ್ಞಾನಿ, ಸ್ವತಂತ್ರ ನಾವೀನ್ಯಕಾರ ಹಾಗೂ ಭಾರತ್ ದೀಪಾ ಡಿಫೆನ್ಸ್ ಅಂಡ್ ಸ್ಪೇಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಇಂಡಿಯಾ ಸಂಸ್ಥಾಪಕರಾದ ದೀಪಕ್ ಎ ಎಸ್ ಅವರು ತಮ್ಮ ಮಹತ್ವದ ಶೈಕ್ಷಣಿಕ ಕೃತಿ “Maximum Number of Facts on ISRO and DRDO by an Individual” ಅನ್ನು ಇದೀಗ ಉನ್ನತ ಗುಣಮಟ್ಟದ ಡಿಜಿಟಲ್ ಇಂಟರಾಕ್ಟಿವ್ ಫ್ಲಿಪ್‌ಬುಕ್ ರೂಪದಲ್ಲಿ ಯಶಸ್ವಿಯಾಗಿ ಪ್ರಕಟಿಸಿದ್ದು, ಈ ಕೃತಿಯು ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಪ್ರಮುಖ ಸಂಸ್ಥೆಗಳಾದ ಇಸ್ರೋ (ISRO) ಮತ್ತು ಡಿಆರ್‌ಡಿಒ (DRDO) ಕುರಿತು 2,050 ಪರಿಶೀಲಿತ ವೈಜ್ಞಾನಿಕ ಸಂಗತಿಗಳನ್ನು ಒಳಗೊಂಡಿರುವ ಸ್ವತಂತ್ರ ಶೈಕ್ಷಣಿಕ ಸಂಗ್ರಹವಾಗಿದೆ. ಈ ವಿಶಿಷ್ಟ ಸಾಧನೆಗಾಗಿ ದೀಪಕ್ ಎ ಎಸ್ ಅವರಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ದೊರೆತಿದೆ.

ಒಟ್ಟು 460 ಪುಟಗಳು ಈ ಪ್ರಕಟಣೆಯನ್ನು ಅತ್ಯಾಧುನಿಕ ಡಿಜಿಟಲ್ ಫ್ಲಿಪ್‌ಬುಕ್ ರೂಪದಲ್ಲಿ ರೂಪಿಸಲಾಗಿದ್ದು, ಮೊಬೈಲ್, ಟ್ಯಾಬ್ಲೆಟ್ ಹಾಗೂ ಕಂಪ್ಯೂಟರ್‌ಗಳಲ್ಲಿ ಸುಲಭವಾಗಿ ಓದುವಂತಿದೆ. ಓದುಗರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದ ವೃತ್ತಿಪರ ವಿನ್ಯಾಸ, ಸುಗಮ ಸಂಚರಣೆ ಮತ್ತು ಉತ್ತಮ ಗುಣಮಟ್ಟದ ಡಿಜಿಟಲ್ ಪ್ರಕಟಣಾ ತಂತ್ರಜ್ಞಾನವನ್ನು ಬಳಸಲಾಗಿದೆ. ವಿದ್ಯಾರ್ಥಿಗಳು, ಸಂಶೋಧಕರು, ವಿಜ್ಞಾನಾಸಕ್ತರು ಹಾಗೂ ಯುವಜನರಲ್ಲಿ ವಿಜ್ಞಾನ, ಸಂಶೋಧನೆ, ನಾವೀನ್ಯತೆ ಮತ್ತು STEM ಶಿಕ್ಷಣದ ಬಗ್ಗೆ ಆಸಕ್ತಿ ಬೆಳೆಸುವುದು ಹಾಗೂ ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ದೀಪಕ್ ಎ ಎಸ್ ಅವರು ತಮ್ಮ ಸ್ವತಂತ್ರ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ಈ ಕೃತಿಯನ್ನು ಸಿದ್ಧಪಡಿಸಿದ್ದು, ಇದನ್ನು ವಿವಿಧ ರಾಷ್ಟ್ರೀಯ ಶೈಕ್ಷಣಿಕ ಹಾಗೂ ವೈಜ್ಞಾನಿಕ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ಸಹ ಕೈಗೊಂಡಿದ್ದಾರೆ. ವಿಜ್ಞಾನ ಜ್ಞಾನವನ್ನು ಸಮಾಜಕ್ಕೆ ತಲುಪಿಸುವುದು ಹಾಗೂ ಮುಂದಿನ ಪೀಳಿಗೆಯನ್ನು ಸಂಶೋಧನೆ ಮತ್ತು ನಾವೀನ್ಯತೆಯತ್ತ ಪ್ರೇರೇಪಿಸುವುದು ತಮ್ಮ ಪ್ರಮುಖ ಧ್ಯೇಯ ಎಂದು ತಿಳಿಸಿದ್ದಾರೆ.

“ಜ್ಞಾನವನ್ನು ಸಮಾಜದೊಂದಿಗೆ ಹಂಚಿಕೊಳ್ಳುವುದು ನನ್ನ ಉದ್ದೇಶ. ಭಾರತದ ವೈಜ್ಞಾನಿಕ ಸಾಧನೆಗಳನ್ನು ಯುವಜನರಿಗೆ ತಲುಪಿಸಿ, ಸಂಶೋಧನೆ ಮತ್ತು ನಾವೀನ್ಯತೆಯತ್ತ ಅವರನ್ನು ಪ್ರೇರೇಪಿಸುವುದು ನನ್ನ ದೀರ್ಘಕಾಲೀನ ಕನಸಾಗಿದೆ. ಈ ಡಿಜಿಟಲ್ ಫ್ಲಿಪ್‌ಬುಕ್ ಆ ಪ್ರಯತ್ನದ ಒಂದು ಮಹತ್ವದ ಹೆಜ್ಜೆಯಾಗಿದೆ,” ಎಂದು ದೀಪಕ್ ಎ ಎಸ್ ಹೇಳಿದರು.