ಶನಿವಾರ, 24 ಅಕ್ಟೋಬರ್ 2026

OYO ರೂಮ್ ನಲ್ಲಿ 3 ಯುವತಿಯರಿಂದ ಯುವಕನಿಗೆ ದೈಹಿಕ ಹಲ್ಲೆ!!

ಡೇಟಿಂಗ್ ಆಪ್ ಮೂಲಕ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಓಯೋ (OYO) ಹೋಟೆಲ್‌ಗೆ ಹೋದ ರಾಹುಲ್ ಸಕ್ಸೇನಾ ಎಂಬ ಯುವಕನ ಮೇಲೆ ಮೂವರು ಯುವತಿಯರು ದೈಹಿಕ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ವರದಿಯಾಗಿದೆ. 

ಏನಿದು ಘಟನೆ?

ರಾಹುಲ್ ಸಕ್ಸೇನಾ ಎಂಬ ಯುವಕನಿಗೆ ಡೇಟಿಂಗ್ ಆಪ್‌ನಲ್ಲಿ ‘ದಿವ್ಯಾ’ ಎಂಬ ಯುವತಿಯ ಪರಿಚಯವಾಗಿತ್ತು. ಅವರಿಬ್ಬರ ಮಾತುಕತೆಯು ಮುಂದುವರಿದು, ನಂತರ ಓಯೋ ಹೋಟೆಲ್‌ನಲ್ಲಿ ಭೇಟಿಯಾಗಲು ನಿರ್ಧರಿಸಿದ್ದರು. ಯುವಕನು ಹೋಟೆಲ್ ರೂಮ್‌ಗೆ ತಲುಪಿದಾಗ ಅಲ್ಲಿ ದಿವ್ಯಾಳ ಜೊತೆಗೆ ಇನ್ನೂ ಇಬ್ಬರು ಯುವತಿಯರು ಇದ್ದರು.

ನಂತರ ಪಾರ್ಟಿ ಮಾಡುವ ನೆಪದಲ್ಲಿ ಯುವತಿಯರು ಯುವಕನನ್ನು ದೈಹಿಕವಾಗಿ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಯುವಕನು ಇದಕ್ಕೆ ಪ್ರತಿರೋಧ ಒಡ್ಡಿದಾಗ, ಮೂವರೂ ಯುವತಿಯರು ಸೇರಿ ಅವನ ಮೇಲೆ ತೀವ್ರವಾಗಿ ದೈಹಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಹುಡುಗನ ಕಿರಿಚಾಟವನ್ನು ಹೇಳಿದ ಹೋಟೆಲ್ ಸಿಬ್ಬಂದಿಯವರು ಬಂದು ಆತನನ್ನು ಬಚಾವ್ ಮಾಡಿದ್ದಾರೆ. 

ಹಲ್ಲೆಯಿಂದಾಗಿ ಯುವಕನ ಸ್ಥಿತಿ ಗಂಭೀರವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೋಟೆಲ್ ಸಿಬ್ಬಂದಿ ಸಕಾಲದಲ್ಲಿ ಸಹಾಯ ಮಾಡದಿದ್ದರೆ ಪ್ರಾಣಕ್ಕೇ ಅಪಾಯವಾಗುತ್ತಿತ್ತು ಎಂದು ಯುವಕ ಹೇಳಿಕೊಂಡಿದ್ದಾನೆ. ಅಲ್ಲದೆ ಯುವಕನು ತನಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾನೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.