Viral Tweet: ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ 242 ಪ್ರಯಾಣಿಕರಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ಟಾಟಾ ಗ್ರೂಪ್ ಸಾವನ್ನಪ್ಪಿದ ಪ್ರತಿಯೊಬ್ಬರ ಕುಟುಂಬಕ್ಕೆ ಒಂದು ಕೋಟಿ ಪರಿಹಾರವನ್ನು ಘೋಷಿಸಿದೆ.
Sponsoredಈ ವಿಮಾನ ಪತನಕ್ಕೆ ಇಡೀ ದೇಶದ ಪ್ರಮುಖರು ಕಂಬನಿ ಮಿಡಿದಿದ್ದಾರೆ. ರಾಜಕೀಯ ನಾಯಕರು ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಅಂತೆಯೇ ಘಟನೆ ಬಗ್ಗೆ ರಾಹುಲ್ ಗಾಂಥಿ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಅನುಭವ್ ಗುಪ್ತಾ ಎಂಬ ಎಕ್ಸ್ ಬಳಕೆದಾರ ಆಕ್ಷೇಪಾರ್ಹವಾಗಿ ಪ್ರತಿಕ್ರಿಯಿಸಿದ್ದರು.
ಹೌದು, ಅನುಭವ್ ಗುಪ್ತಾ ನೀವೂ ಕೂಡಾ ಅದೇ ಫ್ಲೈಟ್ ನಲ್ಲಿರಬೇಕಿತ್ತು ಎಂದು ರಾಹುಲ್ ಗಾಂಧಿ ಸಾವು ಬಯಸಿ ಪ್ರತಿಕ್ರಿಯಿಸಿದ್ದರು. ಈ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈತನ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಬೆಂಬಲಿಗರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಅನುಭವ್ ಗುಪ್ತಾ ಮತ್ತೊಂದು ಟ್ವೀಟ್ ಮಾಡಿದ್ದು, ತಮ್ಮ ಪ್ರತಿಕ್ರಿಯೆಗೆ ಕ್ಷಮೆ ಯಾಚಿಸಿದ್ದಾರೆ.
Mangaluru Plane Crash: ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ, ಅಂದು ಪೈಲಟ್ ಗ್ಲುಸಿಕಾ ಮಾಡಿದ್ದ ತಪ್ಪೇನು?




