ಸುಂದರ ಹಾಗೂ ನೆಮ್ಮದಿಯ ಸಂಸಾರದ ಕನಸನ್ನು ಹೊತ್ತ ಯುವಕನೊಬ್ಬ ತಾನು ಬಯಸಿದಂತೆ ಸುಂದರವಾದ ಯುವತಿಯನ್ನು ಮದುವೆಯಾಗಿದ್ದಾನೆ. ತಾನು ಅಂದುಕೊಂಡಂತೆ ಮದುವೆಯು ನೆರವೇರಿದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿ ನಡೆದಿದೆ. ಆದರೆ ಮದುವೆಯಾದ ಕೇವಲ ಮೂರು ದಿನಕ್ಕೆ ಆತನ ಹೆಂಡತಿ ರೂಮಿನಲ್ಲಿ ಬೇರೊಬ್ಬ ಯುವಕನ ಜೊತೆ ಪತ್ತೆಯಾಗಿದ್ದಾಳೆ.
ಹೌದು, ಮದುವೆಯಾದ ಕೇವಲ ಮೂರು ದಿನಗಳಲ್ಲಿ ಪತ್ನಿಯೊಬ್ಬಳು ಹೋಟೆಲ್‌ನಲ್ಲಿ ಅನ್ಯ ಪುರುಷನೊಂದಿಗೆ ಪತ್ತೆಯಾದ ವಿವಾದಾತ್ಮಕ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪತಿಯು ತನ್ನ ಪತ್ನಿಯನ್ನು ಬೇರೆಯವರ ಜೊತೆ ನೋಡಿ ಆಕ್ರೋಶಗೊಂಡು ಹೋಟೆಲ್‌ನಲ್ಲಿ ಗಲಾಟೆ ಮಾಡಿದ ವೀಡಿಯೊಗಳು ವೈರಲ್ ಆಗಿದ್ದು, ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸ್ ಹಾಗೂ ಯುವತಿಯ ಗಂಡ ಹೊರಗಡೆ ನಿಂತು ರೂಮಿನ ಬಾಗಿಲನ್ನು ಬಡಿಯುತ್ತಿದ್ದಾರೆ. ಎಷ್ಟು ಬಡಿದರು ಬಾಗಿಲು ತೆಗೆಯದ ಯುವತಿ ಕೊನೆಗೆ ಬಂದು ಏನು ಗೊತ್ತಿಲ್ಲದ ರೀತಿಯಲ್ಲಿ ಡೋರ್ ಓಪನ್ ಮಾಡಿದ್ದಾಳೆ. ಬಾಗಿಲು ತೆರೆಯುತ್ತಿದ್ದಂತೆ ಹೊರಗಡೆ ನಿಂತಿರುವ ಪೊಲೀಸ್ ಹಾಗೂ ತನ್ನ ಕಂಡನನ್ನು ಕಂಡು ಶಾಕ್ ಆಗಿದ್ದಾಳೆ. ಬಳಿಕ ಗಂಡ ಸೀದಾ ಒಳಗಡೆ ಹೋಗಿ ಆ ಯುವತಿಯ ಕೆನ್ನೆಗೆ ಒಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸದ್ಯ ಈ ಘಟನೆ ಎಲ್ಲಿ ನಡೆದದ್ದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಅನೇಕ ಸೋಶಿಯಲ್ ಮೀಡಿಯಾ ಗಳಲ್ಲಿ “ಮದುವೆಯಾದ ಮೂರೇ ದಿನಕ್ಕೆ ಬೇರೆ ಯುವಕನ ಜೊತೆ ರೂಮಿನಲ್ಲಿ ಪತ್ತೆಯಾದ ಪತ್ನಿ” ಎಂಬ ಬರಹದೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.
https://www.instagram.com/reel/DaopUmMp3lP/?igsh=MTlncWJjM3RvZzZvOA==




