ಬೆಂಗಳೂರಿನಲ್ಲಿ ಆನ್ಲೈನ್ ಶಾಪಿಂಗ್ ಸಂಸ್ಥೆಗಳಾದ ಫ್ಲಿಪ್ಕಾರ್ಟ್ ಮತ್ತು ಮಿಂತ್ರಾ ಪರವಾಗಿ ಕೆಲಸ ಮಾಡುವ ಡೆಲಿವರಿ ಏಜೆಂಟ್ ಒಬ್ಬ, ಡೆಲಿವರಿ ನೀಡಲು ಬಂದ ಸಂದರ್ಭದಲ್ಲಿ ಒಂಟಿ ಯುವತಿಯೊಬ್ಬಳಿರುವುದನ್ನು ಗಮನಿಸಿ ಆಕೆಯ ಮನೆಯೊಳಕ್ಕೆ ನುಗ್ಗಿ ಅಸಭ್ಯ ವರ್ತನೆ ತೋರಿದ್ದಾನೆ.
Sponsoredಬೆಂಗಳೂರಿನ ನಿವಾಸಿಯಾದ ಸಂತ್ರಸ್ತ ಯುವತಿ ಸಾಮಾಜಿಕ ಜಾಲತಾಣದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾ ಈ ವಿಡಿಯೋವನ್ನು ಹಂಚಿಕೊಂಡಿದ್ದು ಮನೆಯಲ್ಲಿ ತಾವು ಒಂಟಿಯಾಗಿದ್ದ ಸಮಯದಲ್ಲಿ ಪಾರ್ಸೆಲ್ ನೀಡಲು ಬಂದ ಡೆಲಿವರಿ ಏಜೆಂಟ್, ಮನೆ ಒಳಗೆ ಬರಲು ಅನುಮತಿ ಕೇಳಿದ್ದಾನೆ. ಆತನಿಗೆ ಒಳಗೆ ಬರಬೇಡಿ ಎಂದು ಯುವತಿ ಸ್ಪಷ್ಟವಾಗಿ ನಿರಾಕರಿಸಿದ್ದಲ್ಲದೆ, ಪಕ್ಕದ ಮನೆಯವರ ಸಹಾಯ ಪಡೆಯುವಂತೆ ಸೂಚಿಸಿದ್ದಾರೆ. ಆದರೂ ಯುವತಿಯ ಮಾತನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಆತ, ಬಲವಂತವಾಗಿ ಮನೆಯೊಳಗೆ ನುಗ್ಗಿದ್ದಾನೆ.
Marriage AdSponsoredಮನೆಗೆ ನುಗ್ಗಿದ ಆತ ಅಷ್ಟಕ್ಕೇ ನಿಲ್ಲದೆ, ಅಲ್ಲಿನ ಶೌಚಾಲಯವನ್ನು ಬಳಸಿದ್ದಾನೆ. ತದನಂತರ ಅಲ್ಲಿಂದ ಹೊರಡುವ ಮುನ್ನ ಯುವತಿಯ ಎದುರೇ ತನ್ನ ಖಾಸಗಿ ಅಂಗಾಂಗಗಳನ್ನು ಪ್ರದರ್ಶಿಸಿ ವಿಕೃತವಾಗಿ ವರ್ತಿಸಿದ್ದಾನೆ. ಈ ಹಠಾತ್ ಬೆಳವಣಿಗೆಯಿಂದ ಯುವತಿ ತೀವ್ರ ಆಘಾತಕ್ಕೆ ಒಳಗಾಗಿದ್ದು, ಭಯಭೀತರಾಗಿದ್ದಾರೆ. ತನ್ನದೇ ಸ್ವಂತ ಮನೆಯಲ್ಲಿ ತನಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡಿರುವ ಸಂತ್ರಸ್ತೆ, ತಮಗೆ ನ್ಯಾಯ ಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.




