ಸೋಮವಾರ, 26 ಅಕ್ಟೋಬರ್ 2026
Trending

ಭಾರತೀಯಳಾಗಿ ಸಾಯಬೇಕೆಂಬ ಆಸೆ – ಅಮೆರಿಕ ಪೌರತ್ವ ತ್ಯಜಿಸಿ ಭಾರತಕ್ಕೆ ಮರಳಿದ 94ರ ಅಜ್ಜಿ!!

Advertisement

ಆಂಧ್ರ ಮೂಲದ ಅಜ್ಜಿ ಒಬ್ಬರು ತನ್ನ ಕೊನೆಯ ದಿನಗಳನ್ನು ಭಾರತದಲ್ಲಿ ಕಳೆಯಬೇಕು ಹಾಗೂ ಭಾರತೀಯಳಾಗಿ ಸಾಯಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಎರಡು ದಶಕಗಳ ಹಿಂದೆ ಪಡೆದುಕೊಂಡಿದ್ದ ಅಮೆರಿಕದ ಪೌರತ್ವವನ್ನು ತ್ಯಜಿಸಿ ಭಾರತಕ್ಕೆ ಮರಳಿದ್ದಾರೆ. 

Sponsored

ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಚಿಂತಗುಂಪಲ ಗ್ರಾಮದವರಾದ ಕೊಂಡ್ರಗುಂಟ ಮಹಾಲಕ್ಷ್ಮಮ್ಮ ಎಂಬುವವರು, ತಮ್ಮ ಪತಿಯ ಮರಣದ ನಂತರ 2000 ರಲ್ಲಿ ಅಮೆರಿಕಗೆ ಹೋಗಿ ಅಲ್ಲಿಯೇ ನೆಲೆಸಿದ್ದರು. ಅವರಿಗೆ ಅಮೆರಿಕದಲ್ಲಿ ಪೌರತ್ವವೂ ಸಿಕ್ಕಿತ್ತು. ಇದೀಗ ಅವರಿಗೆ 94 ವರ್ಷವಾಗಿದ್ದು, ತಮ್ಮ ಜೀವನದ ಕೊನೆಯ ದಿನಗಳನ್ನು ಭಾರತೀಯ ಪ್ರಜೆಯಾಗಿ ತಮ್ಮ ತಾಯ್ನಾಡಿನಲ್ಲಿಯೇ ಕಳೆಯುವುದು ಅವರ ಏಕೈಕ ಆಸೆಯಾಗಿದೆ. ಹೀಗಾಗಿ ಶೀಘ್ರವಾಗಿ ಭಾರತೀಯ ಪೌರತ್ವ ಪಡೆದುಕೊಳ್ಳಲು ಅಧಿಕಾರಿಗಳನ್ನು ಭೇಟಿಯಾಗಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಭಾರತೀಯ ಪೌರತ್ವ ನೀಡಲು ಮನವಿ ಮಾಡಿದ್ದಾರೆ.

Advertisement
Advertisement

ಬಾಪಟ್ಲಾದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿರುವ ಮಹಾಲಕ್ಷ್ಮಮ್ಮ, ‘ನನಗೆ 95 ವರ್ಷ ತುಂಬುತ್ತಿದೆ. ನನ್ನ ಕೊನೆಯ ದಿನಗಳನ್ನು ತಾಯ್ನಾಡಿನಲ್ಲಿ, ಭಾರತೀಯ ಪ್ರಜೆಯಾಗಿ ಕಳೆಯುವುದು ನನ್ನ ಏಕೈಕ ಆಸೆ. ನನ್ನ ದೇಹದ ಅಂತ್ಯಕ್ರಿಯೆ ಹುಟ್ಟೂರಿನಲ್ಲೇ ನಡೆಸಬೇಕೆಂದು ಬಯಸುತ್ತೇನೆ. ಈಗಾಗಲೇ ನಾನು ಅಮೆರಿಕದ ಪೌರತ್ವವನ್ನು ತ್ಯಜಿಸಿದ್ದೇನೆ. ದಯವಿಟ್ಟು ನನಗೆ ಆದಷ್ಟು ಬೇಗ ಭಾರತೀಯ ಪೌರತ್ವ ಪಡೆಯಲು ಅವಕಾಶ ಮಾಡಿಕೊಡಿ’ ಎಂದಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.

Advertisement
div class="ere-sticky">