ಸೋಮವಾರ, 26 ಅಕ್ಟೋಬರ್ 2026
Trending

Euthanasia: ದಯಾಮರಣ ಪಡೆದ ಹರೀಶ್ ರಾಣಾ ಕೊನೆ ಗಳಿಗೆಯ ವಿಡಿಯೋ ವೈರಲ್!!

Advertisement

Euthanasia : 13 ವರ್ಷದಿಂದ ಕೋಮಾದಲ್ಲಿರುವ 32 ವರ್ಷದ  ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.  ಇದು ಭಾರತದಲ್ಲಿ ನ್ಯಾಯಾಲಯವು ನೀಡಿದ ಮೊದಲ ದಯಾಮರಣ ಪ್ರಕರಣ ಎಂದು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಈ ಪ್ರಕರಣದ ಆದೇಶವನ್ನು ನೀಡುವಾಗ ನ್ಯಾಯಮೂರ್ತಿಗಳು ಕಣ್ಣೀರು ಹಾಕಿದ ಪ್ರಸಂಗ ಕೂಡ ನಡೆದಿದೆ. ಇದೀಗ ದಯಾಮರಣ ಪಡೆಯುವ ಹರೀಶ್ ರಾಣಾ ಅವರ ಕೊನೆಗಳಿಗೆ ವಿಡಿಯೋ ವೈರಲ್ ಆಗಿದೆ.

Sponsored

ಯಸ್, ಇದೀಗ ಆಸ್ಪತ್ರೆಯಲ್ಲಿ ಹರೀಶ್ ರಾಣಾರ ಕೊನೆ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹರೀಶ್ ರಾಣಾ ಅವರನ್ನು ದೆಹಲಿಯ ಏಮ್ಸ್‌ಗೆ ಕರೆತರಲಾಗಿದೆ. ಇದುವರೆಗೂ ನೀಡಲಾಗುತತ್ತಿದ್ದ ಚಿಕಿತ್ಸೆಯನ್ನು ಇದೀಗ ನಿಲ್ಲಿಸಲಾಗಿದೆ. 13 ವರ್ಷಗಳ ಕುಟುಂಬದ ಭರವಸೆ, ಪ್ರಾರ್ಥನೆ ಮತ್ತು ತ್ಯಾಗ ಇದೀಗ ಕೊನೆಗೊಳ್ಳುತ್ತಿದೆ.

Advertisement
Advertisement

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ತನ್ನ ಮಗನಿಗೆ ದಯಾಮರಣಕ್ಕೆ ಕೋರಿ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿದೆ. ರೋಗಿಯ ಆರೋಗ್ಯ ಸ್ಥಿತಿಯ ಕುರಿತು ಎರಡು ವೈದ್ಯಕೀಯ ಮಂಡಳಿಗಳ ಅಭಿಪ್ರಾಯಗಳನ್ನು ಪರಿಗಣಿಸಿ ತೀರ್ಪು ಪ್ರಕಟಿಸಿದೆ. ನ್ಯಾಯಾಲಯವು ತನ್ನ ಮಾರ್ಗಸೂಚಿಗಳ ಅಡಿಯಲ್ಲಿ ನಿಷ್ಕ್ರಿಯ ದಯಾಮರಣವನ್ನು ಅನುಮತಿಸಿದ ಮೊದಲ ಪ್ರಕರಣ ಇದಾಗಿದೆ.

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹರೀಶ್ ರಾಣಾ (Harish Rana) 2013 ರಲ್ಲಿ ಪೇಯಿಂಗ್ ಗೆಸ್ಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹರೀಶ್‌ ರಾಣಾ ಪೋಷಕರು ಮಗನಿಗೆ ದಯಾಮರಣ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ಸುಪ್ರೀಂ ಕೋರ್ಟ್ ದಯಾಮರಣ ಕರುಣಿಸಿ ಆದೇಶ ಹೊರಡಿಸಿದೆ. ಅಲ್ಲದೆ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಭಾವನಾತ್ಮಕ ಪೀಠವು 2018 ರ ಸುಪ್ರೀಂ ಕೋರ್ಟ್ ತೀರ್ಪಿನ ಹಲವಾರು ಅಂಶಗಳನ್ನು ಸ್ಪಷ್ಟಪಡಿಸಿ ಈ ತೀರ್ಪು ನೀಡಿದೆ.

ವಿಡಿಯೋ 👇

https://x.com/i/status/2033096147259257184

Advertisement
div class="ere-sticky">