ಸೋಮವಾರ, 26 ಅಕ್ಟೋಬರ್ 2026
Trending

LPG ಸಿಲಿಂಡರ್ ಬುಕ್ಕಿಂಗ್ ಸಮಸ್ಯೆ – ಆಹಾರ ಇಲಾಖೆಯಿಂದ ಸಹಾಯವಾಣಿ ಬಿಡುಗಡೆ!!

LPG : ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಆತಂಕದ ಕಾರಣದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಅಭಾವ ಎದುರಾಗಿದೆ. ಹಲವಡೆ ಎಲ್ಪಿಜಿ ಸಿಲಿಂಡರ್ ಸಪ್ಲೈ ಇಲ್ಲದಂತಾಗಿ ಗ್ರಾಹಕರು ಪರದಾಡುವಂತಹ ಸ್ಥಿತಿ ತಲುಪಿದೆ. ಇದೀಗ ಕರ್ನಾಟಕ ಆಹಾರ ಇಲಾಖೆಯು ಸಿಲಿಂಡರ್ ವಿತರಣೆಯಲ್ಲಿ ಸಮಸ್ಯೆಯಾಗುತ್ತಿರುವ ಕಾರಣ ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ.

Sponsored

ಹೌದು, ರಾಜ್ಯದಲ್ಲಿಯೂ ಸಿಲಿಂಡರ್ ಅಭಾವ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ಸಿಲಿಂಡರ್ ವಿತರಣೆಯಲ್ಲಿ ಏನಾದರೂ ತೊಂದರೆ ಇದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಕರ್ನಾಟಕ ಆಹಾರ ಇಲಾಖೆ ತಿಳಿಸಿದೆ.

ಸಹಾಯವಾಣಿ ಸಂಖ್ಯೆ 

ಎಲ್‌ಪಿಜಿ ಸಿಲಿಂಡರ್‌ ಸಂಬಂಧಿಸಿದಂತೆ ಆಹಾರ ಇಲಾಖೆ ಸಹಾಯವಾಣಿ ಸಂಖ್ಯೆ: 080 – 22264966