ಸೋಮವಾರ, 26 ಅಕ್ಟೋಬರ್ 2026
Trending

UPI ಶುಲ್ಕದಿಂದ ತಪ್ಪಿಸಿಕೊಳ್ಳಲು ಈ 5 ಸರಳ ಟ್ರಿಕ್ಸ್‌ ಯೂಸ್ ಮಾಡಿ !!

ಇತ್ತೀಚಿಗೆ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರವು ಶಾಕ್ ನೀಡಿದ್ದು, 2000 ಮೊತ್ತಕ್ಕಿಂತ ಹೆಚ್ಚಿನ ಪಾವತಿಗೆ ಶೇಕಡ 0.4 ರಷ್ಟು ಶುಲ್ಕವನ್ನು ವಿಧಿಸಲು ಮುಂದಾಗಿದೆ. ಅಂದರೆ ಗ್ರಾಹಕರು ವ್ಯಾಪಾರಿಗಳಿಗೆ ಪಾವತಿಸುವ ವಹಿವಾಟುಗಳಲ್ಲಿ ₹2,000 ಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳ ಮೇಲೆ ಶೇಕಡಾ 0.4 ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದೆ. ಆದರೆ ನೀವು ಈ ಸರಳ 5 ಟ್ರಿಕ್ಸ್ ಯೂಸ್ ಮಾಡಿದ್ರೆ UPI ಶುಲ್ಕದಿಂದ ತಪ್ಪಿಸಿಕೊಳ್ಳಬಹುದು.

Sponsored

1. ಸಣ್ಣ ಮೊತ್ತದ ಪಾವತಿಗಳಿಗೆ UPI Lite ಬಳಸಿ 

ಸಣ್ಣ ಮೊತ್ತದ ವಹಿವಾಟುಗಳಿಗೆ UPI Lite ಉಪಯುಕ್ತವಾಗಿದೆ. ಬ್ಯಾಂಕ್ ಸರ್ವರ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ವೇಗವಾಗಿ ಪಾವತಿ ಪೂರ್ಣಗೊಳಿಸುವುದು ಇದರ ಪ್ರಮುಖ ಉದ್ದೇಶ. ಆದರೆ, ದೊಡ್ಡ ಮೊತ್ತದ ಪಾವತಿಗಳ ಮೇಲಿನ ಎಂಡಿಆರ್‌ ತಪ್ಪಿಸಿಕೊಳ್ಳಲು UPI Lite ಅನ್ನು ಮಾರ್ಗವಾಗಿ ಬಳಸಬಾರದು. ಸಣ್ಣ ಮೊತ್ತದ ಪಾವತಿಗಳನ್ನು ಸುಲಭವಾಗಿ ಮತ್ತು ವೇಗವಾಗಿ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ.

2. ಬಿಲ್‌ಗಳನ್ನು ಕೃತಕವಾಗಿ ವಿಭಜಿಸಬೇಡಿ

₹5,000 ಅಥವಾ ₹10,000ದಂತಹ ದೊಡ್ಡ ಬಿಲ್‌ಗಳನ್ನು ₹2,000ಕ್ಕಿಂತ ಕಡಿಮೆ ಮೊತ್ತದ ಹಲವು ಭಾಗಗಳಾಗಿ ವಿಭಜಿಸಿ ಪಾವತಿ ಪಡೆಯುವುದು ಶುಲ್ಕ ತಪ್ಪಿಸುವ ಮಾರ್ಗದಂತೆ ಕಾಣಬಹುದು. ಆದರೆ ಕೇವಲ ಶುಲ್ಕ ತಪ್ಪಿಸಿಕೊಳ್ಳುವ ಉದ್ದೇಶದಿಂದ ಬಿಲ್‌ಗಳನ್ನು ಕೃತಕವಾಗಿ ವಿಭಜಿಸಿದರೆ ವ್ಯಾಪಾರಿಗೆ ದಂಡ ವಿಧಿಸುವ ಸಾಧ್ಯತೆಯಿದೆ. 

3. ವೈಯಕ್ತಿಕ ಕ್ಯೂಆರ್ ಕೋಡ್ ಬಳಕೆಯಲ್ಲಿ ಎಚ್ಚರಿಕೆ

ಅನೇಕ ಸಣ್ಣ ವ್ಯಾಪಾರಿಗಳು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಪರ್ಸನಲ್ ಕ್ಯೂಆರ್ ಕೋಡ್ ಬಳಸುತ್ತಾರೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ವರ್ಗಾವಣೆಗಳಿಗೆ ಸಾಮಾನ್ಯವಾಗಿ ಮರ್ಚೆಂಟ್ ಎಂಡಿಆರ್ ಶುಲ್ಕ ಅನ್ವಯಿಸುವುದಿಲ್ಲ.

ಆದರೆ, ವಾಣಿಜ್ಯ ಪಾವತಿಗಳನ್ನು ಉದ್ದೇಶಪೂರ್ವಕವಾಗಿ ವೈಯಕ್ತಿಕ ವಹಿವಾಟುಗಳಂತೆ ತೋರಿಸುವುದು ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆಯಾಗಬಹುದು. ಹೀಗಾಗಿ ವ್ಯಾಪಾರಿಗಳು ತಮ್ಮ ಬ್ಯಾಂಕ್ ಮತ್ತು ಪಾವತಿ ಸೇವಾ ಸಂಸ್ಥೆಗಳ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸರಿಯಾದ ಕ್ಯೂಆರ್ ಕೋಡ್ ಬಳಸುವುದು ಉತ್ತಮ.

4. ದುಬಾರಿ ಸಾಧನಗಳ ಬದಲು ಸ್ಟ್ಯಾಟಿಕ್ QR ಬಳಸಿ

ಪ್ರತಿ ಸಣ್ಣ ವ್ಯಾಪಾರಿಯೂ ದುಬಾರಿ ಪಾಯಿಂಟ್ ಆಫ್ ಸೇಲ್ (POS) ಯಂತ್ರಗಳು ಅಥವಾ ಸೌಂಡ್‌ಬಾಕ್ಸ್‌ಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲ. ಸಾಮಾನ್ಯ ಬ್ಯಾಂಕ್ ಸ್ಟ್ಯಾಟಿಕ್ ಕ್ಯೂಆರ್ ಕೋಡ್ ಬಳಸುವುದರಿಂದ ಸಾಧನ ಬಾಡಿಗೆ ಮತ್ತು ಮಾಸಿಕ ನಿರ್ವಹಣಾ ಶುಲ್ಕವನ್ನು ಕಡಿಮೆ ಮಾಡಿಕೊಳ್ಳಬಹುದು.

5. ನೇರ ಬ್ಯಾಂಕ್ ಖಾತೆಗೆ ಪಾವತಿ ಪಡೆಯಿರಿ

ವ್ಯಾಪಾರಿಗಳು ಗ್ರಾಹಕರಿಂದ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಆಯ್ಕೆಯನ್ನೂ ಪರಿಗಣಿಸಬಹುದು. ಇದಕ್ಕಾಗಿ ಯುಪಿಐ ಅಕೌಂಟ್-ಟು-ಅಕೌಂಟ್ ವರ್ಗಾವಣೆಯ ಜೊತೆಗೆ IMPS ಅಥವಾ NEFT ವಿಧಾನಗಳನ್ನು ಬಳಸಬಹುದು. ಇದರಿಂದ ಪಾವತಿ ಅಗ್ರಿಗೇಟರ್ ಅಥವಾ ಮರ್ಚೆಂಟ್ ವಾಲೆಟ್ ಮೂಲಕ ವಿಧಿಸಲಾಗುವ ಹೆಚ್ಚುವರಿ ಶುಲ್ಕವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಈ ಸೇವೆಗಳಿಗೆ ಬ್ಯಾಂಕ್ ವಿಧಿಸುವ ಶುಲ್ಕಗಳ ಬಗ್ಗೆ ಮುಂಚಿತವಾಗಿ ಪರಿಶೀಲಿಸುವುದು ಮುಖ್ಯ.