ಭಾನುವಾರ, 25 ಅಕ್ಟೋಬರ್ 2026

ಬಗೆಹರಿಯದ ಭೂ ವಿವಾದ – ಪರಿಹರಿಸಲು ಪ್ರಧಾನಿ ಮೋದಿಯನ್ನು ಭೇಟಿಯಾದ 81 ವರ್ಷದ ಹಳೆಯ ಸ್ನೇಹಿತ!!

ದಶಕಗಳಿಂದ ಬಗೆಹರಿಯದ ಭೂ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯ ದೊರಕಿಸಿಕೊಡಬೇಕು ಎಂದು ಮೋದಿ ಅವರ ಹಳೇ ಸ್ನೇಹಿತ, ಮೀರಾ ರಸ್ತೆ ನಿವಾಸಿ ಅಸ್ಗರಲಿ ವೋಹ್ರಾ (81) ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

Sponsored

ವೋಹ್ರಾ ಅವರು ಗುಜರಾತ್‌ ನ ವಡ್‌ನಗರದ ಬಿ.ಎನ್. ಶಾಲೆಯಲ್ಲಿ ಪ್ರಧಾನಿ ಮೋದಿ ಅವರ ಸಹಪಾಠಿಯಾಗಿದ್ದರು. ಸೆಪ್ಟೆಂಬರ್ 8ರಂದು ಅವರು ಪ್ರಧಾನಿಯನ್ನು ಭೇಟಿಯಾಗಿ, ತಮ್ಮ ಭೂ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಪ್ರಧಾನಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎನ್ನಲಾಗಿದೆ. ಹೀಗಾಗಿ ತಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ವೋಹ್ರಾ ಹೇಳಿದ್ದಾರೆ.

Marriage AdMarriage AdSponsored

ಏನು ವಿವಾದ? :

ವೋಹ್ರಾ ಅವರ ಪ್ರಕಾರ, ಅವರು 1989ರಲ್ಲಿ ನೋಂದಾಯಿತ ಒಪ್ಪಂದದ ಮೂಲಕ ಭಾಯಂದರ್ ಪೂರ್ವದ ನವ್‌ಘರ್‌ನಲ್ಲಿ 2,810 ಚದರ ಮೀಟರ್ ಭೂಮಿಯನ್ನು ಖರೀದಿಸಿದ್ದರು. ಆದರೆ, 2011ರಲ್ಲಿ ‘ಸ್ವಯಂ ಬಿಲ್ಡರ್ಸ್’ ಮತ್ತು ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರಿಗೆ ಸಂಬಂಧಿಸಿದ ಕಂಪೆನಿ ಎಂದು ವೋಹ್ರಾ ಹೇಳಿರುವ ‘ಸೆವೆನ್ ಇಲೆವೆನ್ ಕನ್ಸ್ಟ್ರಕ್ಷನ್ಸ್’ ಆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿವೆ ಎಂಬುದು ಅವರ ಆರೋಪ.

ಈ ಭೂಮಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದೂ ವೋಹ್ರಾ ಆರೋಪಿಸಿದ್ದಾರೆ. ಈ ವಿಷಯವನ್ನು ಮೂಲ ಮಾಲೀಕರಿಗೆ ತಿಳಿಯದಂತೆ ಮರೆಮಾಚಲಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಭೂಮಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಬಳಿಕ ಅದರ ಸ್ವಾಧೀನವನ್ನು ‘ಸ್ವಯಂ ಬಿಲ್ಡರ್ಸ್’ ಮತ್ತು ‘ಸೆವೆನ್ ಇಲೆವೆನ್ ಕನ್ಸ್ಟ್ರಕ್ಷನ್ಸ್’ ಹೆಸರಿಗೆ ತೋರಿಸಲಾಗಿದೆ ಎಂದು ವೋಹ್ರಾ ದೂರಿದ್ದಾರೆ.