ಉಡುಪಿ-ಮೂಡುಬೆಳ್ಳೆ-ಕಾರ್ಕಳ ಮಾರ್ಗದಲ್ಲಿ ಸಂಚರಿಸುವ ಶ್ರೀ ಕೃಷ್ಣಪ್ರಸಾದ್ ಹೆಸರಿನ ಸಿಟಿ ಬಸ್‌ವೊಂದು ಉಡುಪಿ ತಾಲೂಕಿನ ಮಣಿಪುರ ಪಂಚಾಯತ್ ವ್ಯಾಪ್ತಿಯ ದೆಂದೂರುಕಟ್ಟೆಯ ಎಂಆರ್‌ಪಿಎಲ್ ಪೆಟ್ರೋಲ್ ಪಂಪ್ ಬಳಿ ನಸುಕಿನ ಸಮಯದಲ್ಲಿ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.
Sponsoredಶುಕ್ರವಾರ ಬೆಳಗಿನ ಜಾವ 3.30ರ ವೇಳೆಗೆ ಬಸ್‌ಗೆ ಬೆಂಕಿ ತಗುಲಿದೆ. ಈ ಘಟನೆಯಿಂದ ರೂ.10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಇದೇ ಪೆಟ್ರೋಲ್ ಪಂಪ್‌ನಲ್ಲಿ ಇನ್ನೊಂದು ಬಸ್ ನಿಲ್ಲಿಸಲಾಗಿದ್ದರೂ ಅದಕ್ಕೆ ಯಾವುದೇ ಹಾನಿಯಾಗಿಲ್ಲ. ಬಸ್‌ಗೆ ಬೆಂಕಿ ತಗುಲಲು ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




