ಟಿವಿಕೆ ಪಕ್ಷದ ನಟ ವಿಜಯ್‌ರಿಂದ ಭರ್ಜರಿ ಉಚಿತ ಘೋಷಣೆ
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ನಟ ವಿಜಯ್ ಅವರು ಭಾರೀ ಉಚಿತ ಘೋಷಣೆಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಟಿವಿಕೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ ರೂ.2500 ಸಹಾಯಧನ, ವಿವಾಹವಾಗಲಿರುವ ಯುವತಿಯರಿಗೆ ಚಿನ್ನದ ನಾಣ್ಯ ಮತ್ತು ರೇಷ್ಮೆ ಸೀರೆ ಉಡುಗೊರೆ, ಎಲ್ಲಾ ಕುಟುಂಬಗಳಿಗೆ 6 ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು ಎಂದು ಪಕ್ಷದ ಅಧ್ಯಕ್ಷ ನಟ ವಿಜಯ್ ಶನಿವಾರ ಘೋಷಣೆ ಮಾಡಿದ್ದಾರೆ.
Sponsoredಮಾಸಿಕ ಸಹಾಯಧನ ಸರಕಾರಿ ಉದ್ಯೋಗಿಗಳನ್ನು ಹೊರತುಪಡಿಸಿ, 60 ವರ್ಷ ಒಳಗಿನ ಎಲ್ಲಾ ಮಹಿಳೆಯರಿಗೆ ಅನ್ವಯವಾಗಲಿದೆ. ಹಾಗೆನೇ ʼಅನ್ನಪೂರ್ಣಿ ಸೂಪರ್ ಸಿಕ್ಸ್ʼ ಯೋಜನೆಯಡಿಯಲ್ಲಿ 6 ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು. ಪ್ರತಿ ತಾಯಿ/ಪೋಷಕರಿಗೆ ಹಾಗೆನೇ ಮಕ್ಕಳು ಶಾಲೆ ತೊರೆಯದ ರೀತಿ ಮಾಡಲು ʼಕಾಮರಾಜರ್ ಕಲ್ವಿ ಉರುತಿ ತಿಟ್ಟಂʼ ಯೋಜನೆಯ ಅಡಿಯಲ್ಲಿ ವಾರ್ಷಿಕ ರೂ.15000 ಧನಸಹಾಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ.




