ಮಂಗಳವಾರ, 27 ಅಕ್ಟೋಬರ್ 2026
Trending

ಎಕ್ಸೆಲ್ ಟೆಕ್ನೋಸ್ಕೂಲ್’ಗೆ ಅಗ್ನಿ ಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಅನುಮತಿ ಇದೆ: ಮುಖ್ಯಸ್ಥರ ಸ್ಪಷ್ಟೀಕರಣ, ಸಾಕ್ಷಿ ಬಿಡುಗಡೆ

ಗುರುವಾಯನಕೆರೆ: ಇಲ್ಲಿನಾ ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ನ ಆಡಳಿತದಲ್ಲಿ ನಡೆಯುತ್ತಿರುವ ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆ ಪ್ರಿ ಪ್ರೈಮರಿಯಿಂದ ಹತ್ತನೆಯ ತರಗತಿಯವರೆಗೆ ದಾಖಲಾತಿ ಮಾಡಿ ತರಗತಿ ನಡೆಸಲು ಸರಕಾರದ ಅನುಮತಿ ಹೊಂದಿದ್ದು, ಸದ್ರಿ ಶಾಲೆಯು ವಿದ್ಯಾ ಸಾಗರ ಕ್ಯಾಂಪಸ್ ನಲ್ಲಿ ಸ್ಥಾಪಿತವಾಗಿರುವ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ.

Sponsored

ಈ ಕಟ್ಟಡಕ್ಕೆ ಸರಕಾರದ ಎಲ್ಲಾ ಇಲಾಖೆಗಳ ಅಗತ್ಯ ಅನುಮತಿ ಲಭ್ಯವಾಗಿದೆ. ಅಗ್ನಿ ಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ನಿಯಮಾನುಸಾರ ಅಗ್ನಿ ಸುರಕ್ಷತೆಯ ಎಲ್ಲಾ ಉಪಕರಣಗಳನ್ನು ಅಳವಡಿಸಿ, ಅಧಿಕಾರಿಗಳ ಪರಿವೀಕ್ಷಣೆ ನಡೆದು, ದಿನಾಂಕ 25/07/2025 ರಂದು ಸಮಾಪನ ಪತ್ರ ( ಸಂ. ಜಿಬಿಸಿ.(2)918/2025 E – Office Com No.59264)vದೊರಕಿರುತ್ತದೆ.

Advertisement
Advertisement

ಈ ಕುರಿತಾದ ಯಾವುದೇ ಗಾಳಿ ಸುದ್ದಿಗಳಿಗೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಹೆತ್ತವರು ವಿಚಲಿತರಾಗಬಾರದು.
ಎಕ್ಸೆಲ್ ವಿದ್ಯಾ ಸಂಸ್ಥೆಗಳಲ್ಲಿ ಯಾವತ್ತೂ ವಿದ್ಯಾರ್ಥಿಗಳ ಕ್ಷೇಮಪಾಲನೆಗೆ ಹಾಗೂ ಇಲಾಖಾ ನಿಯಮಗಳಿಗೆ ಅಗ್ರ ಪ್ರಾಶಸ್ತ್ಯ ನೀಡಲಾಗುತ್ತದೆ ಎನ್ನುವುದನ್ನು ಸಾರ್ವಜನಿಕರು ಮನಗಾಣಬೇಕೆಂದು ವಿನಂತಿ ಎಂದು ಎಕ್ಸೆಲ್ ಟೆಕ್ನೋದ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದೆ. ಅಲ್ಲದೆ ಈ ಸಂಬಂಧ ಸಾಕ್ಷಿಯನ್ನೂ ನೀಡಿದ್ದು, ಜನರು ಗಾಳಿ ಸುದ್ದಿಯನ್ನು ನಂಬಬಾರದೆಂದು ಆಡಳಿತ ಮಂಡಳಿ ಕೋರಿಕೊಂಡಿದ್ದಾರೆ.

 

Advertisement