ಸೋಮವಾರ, 26 ಅಕ್ಟೋಬರ್ 2026
Trending

Bigg Boss ಒಳಗೆ ‘ನಾನು ಸಿಂಹ’ ಅಂತ ಘರ್ಜಿಸಿದ್ದ ಲಾಯರ್ ಜಗದೀಶ್ ಗೆ ಬಿಗ್ ಶಾಕ್ ಕೊಟ್ಟ ವಕೀಲರ ಸಂಘ !!

Bigg Boss ನಾನು ಸಿಂಹ, ಬಿಗ್ ಬಾಸ್ ಅನ್ನೇ ಉಡಾಯಿಸುತ್ತೇನೆ ಎಂದೆಲ್ಲಾ ಧಮ್ಕಿ ಹಾಕಿದ್ದಾರೆ. ಆದರೆ ಇದೀಗ ಜಗದೀಶ್ ಅವರಿಗೇ ಬಾರ್ ಕೌನ್ಸಿಲ್ ಬಿಗ್ ಶಾಕ್ ನೀಡಿದೆ.

Advertisement

Bigg Boss: ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ಶುರುವಾಗಿದ್ದು ಮೊದಲ ದಿನದಿಂದಲೇ ಜಟಾಪಟಿಯ ಕಿಚ್ಚು ಹೆಚ್ಚಾಗಿದೆ. ಬಿಗ್ ಬಾಸ್ ಮನೆಯಲ್ಲಿರುವ ವಕೀಲ್ ಜಗದೀಶ್ ಅಬ್ಬರ ಮಾಡುತ್ತಿದ್ದು ನಾನು ಸಿಂಹ, ಬಿಗ್ ಬಾಸ್ ಅನ್ನೇ ಉಡಾಯಿಸುತ್ತೇನೆ ಎಂದೆಲ್ಲಾ ಧಮ್ಕಿ ಹಾಕಿದ್ದಾರೆ. ಆದರೆ ಇದೀಗ ಜಗದೀಶ್ ಅವರಿಗೇ ಬಾರ್ ಕೌನ್ಸಿಲ್ ಬಿಗ್ ಶಾಕ್ ನೀಡಿದೆ.

Sponsored

ಹೌದು, ಲಾಯರ್ ಜಗದೀಶ್ ಪಿಯುಸಿಯನ್ನೇ ಓದದೇ ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ, ಡಿಗ್ರಿ ಮಾಡಿದ್ದಾರೆ. ಅಲ್ಲದೆ, ಪದವಿ ಮೇಲೆ ಎಲ್‌ಎಲ್‌ಬಿ ಮಾಡಿ, ಬೆಂಗಳೂರಿನ ಬದಲು ದೆಹಲಿಗೆ ಹೋಗಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ವಕೀಲಿಕೆ ಸನ್ನದು ಪಡೆದಿದ್ದಾರೆ.. ಹೀಗಾಗಿ ಅವರ ಬಾರ್ ಕೌನ್ಸಿಲ್ ಲೈಸೆನ್ಸ್ ರದ್ದತಿ ಕೋರಿ ಹಿಮಾಂಶು ಭಾಟಿ ಎನ್ನುವವರು ಕೌನ್ಸಿಲ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಅದು ನಕಲಿ ಅಂಕಪಟ್ಟಿ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಕೀಲ ಪರವಾನಗಿಯನ್ನು ರದ್ದುಗೊಳಿಸಿ ದೆಹಲಿ ಬಾರ್ ಕೌನ್ಸಿಲ್ ಆದೇಶ ಹೊರಡಿಸಿದೆ.

Advertisement
Advertisement

ಅಂದಹಾಗೆ ಇದೀಗ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರಗಿ ಈ ಕುರಿತ ದಾಖಲೆಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಅಲ್ಲದೆ, ʼBigg boss ಜಗದೀಶನ ಲಾ ಡಿಗ್ರಿ ಕ್ಯಾನ್ಸಲ್ ಆಗಿದೆ. ಆತನ 2nd PUC ಮಾರ್ಕ್ಸ್ ಕಾರ್ಡ್ ನಕಲಿ ಆಗಿರುವುದರಿಂದ, ನಂತರದ ಡಿಗ್ರಿಗಳು (ಕಾನೂನು ಡಿಗ್ರಿ ಸೇರಿ) ಮಾನ್ಯವಲ್ಲದಿದ್ದುದರಿಂದ ಆತನ ಸನ್ನದ್ದು ವಾಪಾಸ್ ಕೊಡುವಂತೆ ಬಾರ್ ಕೌನ್ಸಿಲ್ ಆದೇಶ ನೀಡಿದೆ. Don’t call him lawyer shaeeb. It’s an insult to advocates. ಎಂದು ಸಂಬರಗಿ ಬರೆದುಕೊಂಡಿದ್ದಾರೆ..

Advertisement
div class="ere-sticky">