ಉಜಿರೆ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ತಿಂಗಳ ತಿರುಳು “ಕರ್ಣಾಂತರಂಗ” ಯಕ್ಷಗಾನ ಪ್ರಾತ್ಯಕ್ಷತೆ
ಉಜಿರೆ: ಇಂದು, ಜುಲೈ 22 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಪ್ರಸ್ತುತಪಡಿಸುವ ತಿಂಗಳ ತಿರುಳು ಕಾರ್ಯಕ್ರಮವಾದ “ಕರ್ಣಾಂತರಂಗ” ಯಕ್ಷಗಾನ ಪ್ರಾತ್ಯಕ್ಷತೆ ವೈಭವದಿಂದ ನಡೆಯಿತು.
Sponsoredಕಾರ್ಯಕ್ರಮದ ಅಧ್ಯಕ್ಷರಾದ-ಡಾ. ನಾಗಣ್ಣ ಡಿ.ಎ ( ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರು, ಎಸ್.ಡಿ.ಎಂ (ಸ್ವಾಯತ್ತ) ಕಾಲೇಜು ಉಜಿರೆ),ಮುಖ್ಯ ಅತಿಥಿಗಳಾಗಿ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ (ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳು ಮತ್ತು ಕಲಾವಿದರು), ವಿ.ಕೆ ಕಡಬ (ಮುಖ್ಯಸ್ಥರು, ರೇಡಿಯೋ ನಿನಾದ) ತೃಪ್ತ ಕುಮಾರ್ ಜೈನ್ ( ಮುಖ್ಯಸ್ಥರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ ), ಅರುಣ್ ಕುಮಾರ್ ಧರ್ಮಸ್ಥಳ ( ಯಕ್ಷಗಾನ ತರಬೇತುದಾರರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ), ಪುನೀತ್ (ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ), ಉಜಿರೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು) ಅರವಿಂದ್ (ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ), ಉಜಿರೆ) ಶ್ರೇಯಸ್ ಪಾಳಂದೆ ( ಸಂಸ್ಕೃತ ಉಪನ್ಯಾಸಕರು, ಎಸ್.ಡಿ.ಎಂ( ಸ್ವಾಯತ್ತ )ಕಾಲೇಜು ಉಜಿರೆ) ಮುಖೇಶ್ ದೇವಾಧರ್ (ಹಿರಿಯ ವಿಧ್ಯಾರ್ಥಿ, ಪ್ರಸಿದ್ಧ ಬಣ್ಣದ ವೇಷಧಾರಿ) ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಈ ಸಂಭ್ರಮದ ಸಮಯದಲ್ಲಿ “ಕರ್ಣಾಂತರಂಗ” ಯಕ್ಷಗಾನ ಪ್ರಾತ್ಯಕ್ಷತೆ ಪ್ರಸ್ತುತ ಪಡಿಸಲಾಯಿತು. ಪಾತ್ರ ಪರಿಚಯ – ಕರ್ಣ: ದಿನೇಶ್ ಶೆಟ್ಟಿ ಕಾವಳಕಟ್ಟೆ , ಕುಂತಿ : ದೀಕ್ಷಾ, ಶ್ರೀಕೃಷ್ಣ: ತೇಜಸ್ ಪಾತ್ರ ವಹಿಸಿದ್ದರು. ವಿಧ್ಯಾರ್ಥಿ ಸಂಯೋಜಕರಾಗಿ ಸಹನ, ತೇಜಸ್ ಕಾರ್ಯಕ್ರಮ ನಿರ್ವಹಿಸಿದರು. ಸಾಕ್ಷ, ಯಶ್ಮಿತಾ, ಹರ್ಷಿಣಿ, ಸ್ಮೃತಿ ಪ್ರಾರ್ಥಿಸಿದರೆ, ಅನನ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಯಜ್ಞ ಅವರು ಸ್ವಾಗತಿಸಿ, ಧನ್ಯವಾದ ಕಾರ್ಯಕ್ರಮವನ್ನು ಅಪೂರ್ವ ಅವರು ನೆರವೇರಿಸಿದರು.





