ಶನಿವಾರ, 24 ಅಕ್ಟೋಬರ್ 2026

ಸುಳ್ಯದಲ್ಲಿ ಲಾರಿ ಡಿಕ್ಕಿ – ಪುತ್ತೂರಿನ ವ್ಯಕ್ತಿ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಾದ ವಿನೋಭಾ ನಗರದಲ್ಲಿ ಲಾರಿ ಡಿಕ್ಕಿಯಾಗಿ ಪುತ್ತೂರಿನ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೆ. 19ರ ಸಂಜೆ ನಡೆದಿದೆ. 

ಮೃತ್ತ ವ್ಯಕ್ತಿಯನ್ನು ಪುತ್ತೂರಿನ ಕೂಡಿಪಾಡಿ ನಿವಾಸಿ ದೀಪಕ್ ಎಂದು ಗುರುತಿಸಲಾಗಿದೆ. ದೀಪಕ್ ಅವರು ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಹಿಂಬಂದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಕೆದಿಲ ನಿವಾಸಿ ಅಬ್ದುಲ್ ಲತೀಫ್ ಅವರು ಚಲಾಯಿಸುತ್ತಿದ್ದ KA 01 AM 2449 ನೋಂದಣಿಯ ಲಾರಿ, ವಿನೋಭಾನಗರದಲ್ಲಿ ನಡೆದುಕೊಂಡು ಸಾಗುತ್ತಿದ್ದ ದೀಪಕ್ ಅವರಿಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ರಸ್ತೆಗೆಸಯಲ್ಪಟ್ಟ ದೀಪಕ್ ಅವರ ಮೇಲೆ ಲಾರಿ ಹರಿದ ಕಾರಣ ಅವರ ತಲೆಯ ಮೇಲ್ಬಾಗ ಹಾಗೂ ಮುಖ ಸಂಪೂರ್ಣವಾಗಿ ನುಜ್ಜುಗುಜ್ಜಾಗಿತ್ತು.

ಲಾರಿ ಚಾಲಕನ ಅಜಾಗರಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರ ತಿಳಿಸಿದ್ದಾರೆ. ಸದ್ಯ ಪ್ರಕರಣದ ಹೆಸರಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ