ಭಾನುವಾರ, 25 ಅಕ್ಟೋಬರ್ 2026
Trending

ಸುಳ್ಯ : ಮೂರೂರು ಬಳಿ ಲಾರಿ-ಓಮ್ನಿ ಡಿಕ್ಕಿ ,ನಾಲ್ವರಿಗೆ ಗಾಯ

ಸುಳ್ಯ – ಕಾಸರಗೋಡು ಗಡಿ ಪ್ರದೇಶವಾದ ಮುರೂರು ಬಳಿ ಈಚರ್ ಲಾರಿ ಮತ್ತು ಓಮಿನಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಇಂದು ವರದಿಯಾಗಿದೆ.

Sponsored

ಕಾಸರಗೋಡಿನಿಂದ ಮಡಿಕೇರಿಗೆ ತೆರಳುತ್ತಿದ್ದ ಮಡಿಕೇರಿ ಮೂಲದ ಒಂದೇ ಕುಟುಂಬದ ನಾಲ್ವರು ಓಮಿನಿ ಕಾರ್‌ಗೆ ಕೇರಳಕ್ಕೆ ಹೋಗುತ್ತಿದ್ದ ತರಕಾರಿ ತುಂಬಿದ ಈಚರ್ ವಾಹನ ಮೂರೂರು ಬಳಿ ರಸ್ತೆಯ ತಿರುವಿನಲ್ಲಿ ಡಿಕ್ಕಿಯಾಗಿದೆ.

ಘಟನೆಯಿಂದ ಓಮ್ನಿ ಚಾಲಕ ಸೇರಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಪುಟ್ಟ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.