ಬೆಳಗಾವಿ:ಕಳ್ಳತನ ಮಾಡಿ ಮನೆಯ ಮೂಲೆಯಲ್ಲೊ ಅಥವಾ ಗುಂಡಿಗಳಲ್ಲೋ ಇಟ್ಟಂತಹ ಘಟನೆ ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ಕಬ್ಬಿನ ಗದ್ದೆಯಲ್ಲಿ ಕೋಟಿ ಕೋಟಿ ಹಣ, ಕೆಜಿಗಟ್ಟಲೇ ಚಿನ್ನ ಪತ್ತೆಯಾಗಿದೆ.
Sponsoredಈ ಕಬ್ಬಿನ ಗದ್ದೆಯಲ್ಲಿದ್ದ ಅಷ್ಟೊಂದು ಹಣ ನೋಡಿ ಪೊಲೀಸರೇ ಶಾಕ್ ಆಗುವಂತಹ ವಿಚಿತ್ರ ಘಟನೆ ನಡೆದಿದೆ. ಈ ಕಳ್ಳತನ ಡಿಸಿಸಿ ಬ್ಯಾಂಕ್ನಲ್ಲಿರುವ ಕ್ಲರ್ಕ್ನಿಂದಲೇ ಕಳ್ಳತನವಾಗಿದೆ. ಆದರೆ ಕದ್ದ ಹಣ, ಚಿನ್ನವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟು,ಕಳ್ಳ ಕ್ಲರ್ಕ್ ಬಸವರಾಜು ಮಾತ್ರ ನನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದಾರೆ.
4 ಕೋಟಿ ರೂ ಮೌಲ್ಯದ ಹಣ, 3 ಕೆಜಿ 148 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು,ಕಾಲ್ ರೆಕಾರ್ಡ್ ತೆಗೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಮುಂದಿನ ತಿಂಗಳು ಬಸವರಾಜು ಹಸೆಮಣೆ ಏರಬೇಕಿತ್ತು. ಹಾಗಾಗಿ ಮದುವೆಗೆ ಹಣ ಬೇಕೆಂದು ಕಳ್ಳತನದ ಹಾದಿ ಹಿಡಿದಿದ್ದಾರೆ ಎಂಬುದು ತಿಳಿದು ಬಂದಿದೆ.




