ಸೋಮವಾರ, 26 ಅಕ್ಟೋಬರ್ 2026
Trending

ಕಾಂಗ್ರೆಸ್ ಸಮಾವೇಶದಿಂದ NEET ಬರೆಯದ ವಿದ್ಯಾರ್ಥಿಗಳು – ನಷ್ಟ ತುಂಬಿಕೊಡಲು ಸಿದ್ಧ ಎಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌

ಜೂನ್ 21ರಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಕಾರಣಕ್ಕಾಗಿ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದರು. ಈ ಬಗ್ಗೆ ಬಿಜೆಪಿ ಕಾಂಗ್ರೆಸ್ ಮೇಲೆ ಗಂಭೀರ ಆರೋಪ ಮಾಡಿತ್ತು. ಇದೀಗ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ವಿದ್ಯಾರ್ಥಿಗಳಿಗೆ ನಷ್ಟ ತುಂಬಿಕೊಡಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.

Sponsored

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಕಾಂಗ್ರೆಸ್‌ ಸಂಕಲ್ಪ ಸಮಾವೇಶದ ಕಾರಣಕ್ಕೆ 2-3 ವಿದ್ಯಾರ್ಥಿಗಳು ನೀಟ್‌ಗೆ ಹಾಜರಾಗದೆ ಉಳಿದಿದ್ದರೆ ವಿಷಾದ ವ್ಯಕ್ತಪಡಿಸುತ್ತೇವೆ. ವಿದ್ಯಾರ್ಥಿಗಳ ಸಂಕಷ್ಟ ಕೇಳಲು ತಂಡ ಮಾಡಿ, ಅವರಿಗೆ ಆಗಿರುವ ನಷ್ಟ ತುಂಬಿಕೊಡಲು ಸಿದ್ಧರಿದ್ದೇವೆ’ ಎಂದು. ಹೇಳಿದ್ದಾರೆ.

Advertisement
Advertisement

ಅಲ್ಲದೆ ‘ನರೇಂದ್ರ ಮೋದಿ ಸರ್ಕಾರದ ನೀಟ್‌ ಅಕ್ರಮಗಳಿಂದ 12 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋದಿ ಅವರಾಗಲಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರಾಗಲಿ ವಿಷಾದ ವ್ಯಕ್ತಪಡಿಸಿದ್ದಾರೆಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ‘ಲಕ್ಷಾಂತರ ಜನರಿಗೆ ಪದೇ ಪದೇ ಪರೀಕ್ಷೆ ಬರೆಯುವಂತೆ ಮಾಡುತ್ತಿರುವುದು ಬಿಜೆಪಿ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ 1.40 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದೆ. ಕಾಂಗ್ರೆಸ್‌ ಬಗ್ಗೆ ಗೂಬೆ ಕೂರಿಸುತ್ತಿರುವ ಬಿಜೆಪಿಯ ಗೂಬೆಗಳು ಈ ಬಗ್ಗೆ ಮಾತನಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಮೈಸೂರಿನಲ್ಲಿ 1400 ವಿದ್ಯಾರ್ಥಿಗಳು, ಯಾದಗಿರಿಯಲ್ಲಿ 286, ದಕ್ಷಿಣ ಕನ್ನಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇಲ್ಲಿ ಯಾವ ಕಾರ್ಯಕ್ರಮ ನಡೆದಿತ್ತು? ಸುಳ್ಳಿನ ಕಾರ್ಖಾನೆ ಇಟ್ಟುಕೊಂಡಿರುವ ಬಿಜೆಪಿಯವರು ತಮ್ಮ ತಪ್ಪು ಮರೆಮಾಚಲು ಕಾಂಗ್ರೆಸ್ ವಿರುದ್ಧ ಕುಂಟು ನೆಪ ಹೇಳುವುದು ಬೇಡ’ ಎಂದರು. 

 ಇಲ್ಲಿ ಬಿಕೆ ಹರಿಪ್ರಸಾದವರು ವಿದ್ಯಾರ್ಥಿಗಳಿಗೆ ಆಗಿರುವ ನಷ್ಟ ತುಂಬಿಕೊಡಲು ಸಿದ್ದರಿದ್ದೇವೆ ಎಂದು ಹೇಳಿರುವುದು ಸ್ವಾಗತಾರ್ಹ. ಆದರೆ ಬೇರೆ ಬೇರೆ ಕಡೆಗಳಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದಾರೆ ಅಲ್ಲಿ ಯಾವ ಕಾರ್ಯಕ್ರಮ ನಡೆದಿತ್ತು ಎಂದು ಪ್ರಶ್ನೆ ಕೇಳಿರುವುದುಅಪಹಾಸ್ಯ. ಯಾಕೆಂದರೆ ಗೈರಾಗಿರುವ ವಿದ್ಯಾರ್ಥಿಗಳು ಸ್ವಾ ಇಚ್ಚೆಯಿಂದಾಗಿ ಪರೀಕ್ಷೆ ಬರೆದಿಲ್ಲ. ಅದು ಆಕಸ್ಮಿಕ ಅಲ್ಲ. ಆದರೆ ಪರೀಕ್ಷೆ ಬರೆಯಬೇಕೆಂದು ಬಂದಿರುವ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿರುವುದು ನಿಜ ಅಲ್ಲವೇ. ತಾವು ಉನ್ನತ ಸ್ಥಾನದಲ್ಲಿದ್ದು, ಮಾತನಾಡುವ ಮುಂಚೆ ಸ್ವಲ್ಪ ಯೋಚಿಸುವುದು ನಿಮ್ಮ ಘನತೆಗೆ ಸರಿ ಎನಿಸುತ್ತದೆ.

Advertisement