ಸೋಮವಾರ, 26 ಅಕ್ಟೋಬರ್ 2026
Trending

ರಾಜ್ಯ ವಕ್ಫ್‌ ಕರಡು ನಿಯಮ ಪರಿಶೀಲನೆಗೆ ಖಾದರ್‌ ನೇತೃತ್ವದ ಸಮಿತಿ

ಬೆಂಗಳೂರು: ಕೇಂದ್ರ ಸರಕಾರದ “ಉಮೀದ್‌” (ವಕ್ಫ್‌) ಕಾಯ್ದೆ ಅಡಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್‌ ನಿಯಮಗಳನ್ನು ಜಾರಿಗೊಳಿಸಲು ರೂಪಿಸಲಾಗಿರುವ ಕರಡು ನಿಯಮಗಳನ್ನು ಪರಿಶೀಲಿಸಿ ಅಂತಿಮಗೊಳಿಸಲು ಅಲ್ಪಸಂಖ್ಯಾಕರ ಕಲ್ಯಾಣ ಸಚಿವ ಯು ಟಿ ಖಾದರ್‌ ಅಧ್ಯಕ್ಷತೆಯಲ್ಲಿ ಸರಕಾರ ಸಮಿತಿ ರಚಿಸಿದೆ.

Sponsored

ಸಮಿತಿಯಲ್ಲಿ ರಾಜ್ಯಸಭಾ ಸದಸ್ಯ ಸಯ್ಯದ್‌ ನಾಸಿರ್‌ ಹುಸೇನ್‌, ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷ ಡಾ.ಸಯ್ಯದ್‌ ಮುಹಮ್ಮದ್‌, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಶಾಹುಲ್‌ ಹಮೀದ್‌ ಸಹಿತ 16 ಮಂದಿ ಇದ್ದಾರೆ.

Advertisement