ಸೋಮವಾರ, 26 ಅಕ್ಟೋಬರ್ 2026
Trending

ಬಂಗೀ ಜಂಪ್ ವೇಳೆ ಹಗ್ಗ ಕಟ್ಟಲು ಮರೆತ ಸಿಬ್ಬಂದಿ – 130 ಅಡಿ ಆಳಕ್ಕೆ ಬಿದ್ದು 21 ರ ಯುವತಿ ಸಾವು

Advertisement

ಇತ್ತೀಚಿನ ದಿನಗಳಲ್ಲಿ ಬಲು ಎತ್ತರದಿಂದ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆಳಗೆ ಧುಮುಕುವ ಈ ಸಾಹಸದ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾನಲ್ಲಿ ನೋಡಿರುತ್ತೆವೆ. ಇದನ್ನು ಬಂಗೀ ಜಂಪ್ ಎನ್ನುತ್ತಾರೆ. ಅಂತೆಯೇ ಕೆಲದಿನಗಳ ಹಿಂದೆ ಬ್ರೆಜಿಲ್​ನಲ್ಲಿ ಯುವತಿಯೊಬ್ಬಳ ಸೊಂಟಕ್ಕೆ ಹಗ್ಗ ಕಟ್ಟುವುದನ್ನು ಮರೆತ ಬಂಗೀ ಜಂಪಿಂಗ್​ ತಂಡ ಆಕೆಯನ್ನು ಸುಮಾರು 130 ಅಡಿ ಎತ್ತರಿಂದ ಕೆಳಗೆ ಬಿಸಾಕಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

Sponsored

ಬ್ರೆಜಿಲ್​ನ ಸಾವೊ ಪಾಲೊ ರಾಜ್ಯದ ಲಿಮೈರಾ ನಗರದಲ್ಲಿ 21 ವರ್ಷದ ಯುವತಿ ಮಾರಿಯಾ ಎಡ್ವರ್ಡಾ ಟ್ರೈನರ್ ಲೋಪದಿಂದಾಗಿ ಬಂಗೀ ಜಂಪ್ ಮಾಡುವಾಗ ಬಿದ್ದು ಮೃತಪಟ್ಟಿದ್ದಾಳೆ. ಇಕೆಯನ್ನು ಬಂಜಿ ಜಂಪಿಂಗ್​ಗೆ ಸಿದ್ದಪಡಿಸಿದ ತಂಡ ಸುರಕ್ಷಾ ಹಗ್ಗವನ್ನು ಆಕೆಯ ಸೊಂಟಕ್ಕೆ ಸಿಕ್ಕಿಸುವುದನ್ನು ಮರೆತಿದ್ದು, ಇಬ್ಬರು ಯುವಕರು, ಯುವತಿಯನ್ನು ಎತ್ತಿ ಬಿಸಾಕಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗಿದೆ. ಇದೇ ವಿಡಿಯೋನಲ್ಲಿ ಅಲ್ಲಿದ್ದ ಇತರ ಯುವ ಸಮುದಾಯ, ರೋಪ್​, ರೋಪ್​ (ಹಗ್ಗವನ್ನು ಸಿಕ್ಕಿಸಿಲ್ಲ) ಎಂದು ಕೂಗುತ್ತಿದ್ದಾರೆ. ಆದರೆ ಅಷ್ಟರಲ್ಲಾಗದೆ ಯುವತಿಯನ್ನು ಆಳಕ್ಕೆ ತಳ್ಳಲಾಗಿತ್ತು. ಸುಮಾರು 130 ಅಡಿ ಮೇಲಿದ್ದ ನೆಲಕ್ಕೆ ಅಪ್ಪಳಿಸಿರುವ ಯುವತಿ, ತೀವ್ರ ರಸ್ತಸ್ರಾವಕ್ಕೆ ಒಳಗಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆ ಸೇರಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಆಕೆ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. 

Advertisement
Advertisement

ಈ ಘಟನೆ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ, ಅಲ್ಲಿಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯ ಆಡಳಿತವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಸಾಹಸ ಕ್ರೀಡಾಕೂಟಗಳಲ್ಲಿ ಇನ್ಮುಂದೆ ಇಂತಹ ಯಾವುದೇ ಲೋಪಗಳು ನಡೆಯದಂತೆ ತಡೆಯಲು ತನಿಖಾ ಸಂಸ್ಥೆಗಳು ಕಟ್ಟುನಿಟ್ಟಿನ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಮರುರೂಪಿಸುತ್ತಿವೆ. 

https://x.com/i/status/2066005139538768043

Advertisement
div class="ere-sticky">