ಮಂಗಳವಾರ, 27 ಅಕ್ಟೋಬರ್ 2026
Trending

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಗಮನಿಸಿ! ಈ ಬಾರಿ ಪ್ರಿಪರೇಟರಿ ಮಾದರಿಯಲ್ಲೇ ಎಸ್‌ಎ-1 ಪರೀಕ್ಷೆ

Karnataka SSLC and Second Puc Exam

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ರಾಜ್ಯಮಟ್ಟದ 1ನೇ ಸಂಕಲನಾತ್ಮಕ ಮೌಲ್ಯಮಾಪನವನ್ನು (ಎಸ್‌ಎ-1) ಸೆ.23 ರಿಂದ 30ರವರೆಗೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟ ಮಾಡಿದೆ.

Sponsored

ಪೂರ್ವ ಸಿದ್ಧತಾ ಪರೀಕ್ಷೆಯ ಮಾದರಿಯಲ್ಲಿಯೇ ಎಸ್‌ಎ1 ನಡೆಸಲು ಸೂಚನೆ ನೀಡಿದ್ದು ಏಕರೂಪವಾದ ಪ್ರಶ್ನೆ ಪತ್ರಿಕೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದಲೇ ಸಿದ್ಧಪಡಿಸಿ ನೀಡಲು ತೀರ್ಮಾನಿಸಲಾಗಿದೆ ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement
Advertisement

ವೇಳಾಪಟ್ಟಿ ಪ್ರಕಾರ, ಸೆ.23 ಪ್ರಥಮ ಭಾಷೆ, 24ರಂದು ವಿಜ್ಞಾನ, 25ಕ್ಕೆ ತೃತೀಯ ಭಾಷೆ, 26ರಂದು ಸಮಾಜ ವಿಜ್ಞಾನ, 28ಕ್ಕೆ ಗಣಿತ, 29ರಂದು ದ್ವಿತೀಯ ಭಾಷೆ ಮತ್ತು ಕೊನೆಯ ದಿನ ಸೆ.30ರಂದು ದೈಹಿಕ ಶಿಕ್ಷಣ/ವೃತ್ತಿ ಶಿಕ್ಷಣ/ಮೌಲ್ಯ ಶಿಕ್ಷಣ ವಿಷಯಗಳಿಗೆ ಎಸ್‌ಎ-1 ನಡೆಯಲಿದೆ.

ಮಂಡಳಿ ಸಿದ್ಧಮಾಡಿದ ಪ್ರಶ್ನೆ ಪತ್ರಿಕೆಗಳನ್ನು ಆಯುಕ್ತರ ಕಚೇರಿ ಮೇಲ್ವಿಚಾರಣೆಯಲ್ಲಿ ವೇಳಾಪಟ್ಟಿಯಂತೆ ಪರೀಕ್ಷಾ ದಿನ ಆಯಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಲಾಗಿನ್‌ಗೆ ಕಳುಹಿಸಿಕೊಡಲಾಗುತ್ತದೆ. ಅದನ್ನು ಡೌನ್‌ಲೋಡ್‌ ಮಾಡಿ ಮುದ್ರಿಸಿ ಎಸ್‌ಎ-1 ಪರೀಕ್ಷೆ ನಡೆಸಬೇಕೆಂದು ಸೂಚಿಸಲಾಗಿದೆ.

Advertisement