ಮಂಗಳೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತದಲ್ಲಿ ಮಂಗಳೂರಿನ ಶ್ರೀನಿವಾಸ್ ಯೂನಿವರ್ಸಿಟಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಎಐ ಆಧಾರಿತ ಸ್ವಯಂ ಚಾಲಿತ ವಿದ್ಯುತ್ ವಾಹನ ಮತ್ತು ಶ್ರೀನಿ ಬೋಟ್ ಎಐ ರಿಸೆಪ್ಶನ್ ಬೋಟ್ ಅಭಿವೃದ್ಧಿಪಡಿಸುವ ಮೂಲಕ ಭವಿಷ್ಯದ ಸ್ಮಾರ್ಟ್ ತಂತ್ರಜ್ಞಾನಕ್ಕೆ ಹೊಸ ದಿಕ್ಕನ್ನು ತೋರಿಸಿದೆ.
Sponsoredಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ ಈ ಎರಡು ಆವಿಷ್ಕಾರಗಳ ಪ್ರಾತ್ಯಕ್ಷಿಕೆ ಇಂದು ನಡೆಯಿತು. ಲೀಡರ್ ವಿಷನ್ ಫಿಕ್ಷನ್ ಜಿಪಿಎಸ್ ಆಧಾರಿತ ಮಾರ್ಗ ಸಂಚಲನ, ಆಲ್ಟೋ ಸೋನಿಕ್ ಸೆನ್ಸಾರ್ ಬ್ಲೂಟೂತ್ ಹಾಗೂ ಆಂಡ್ರೂ ಪ್ಲೇಟ್ ಇಂಟರ್ ಪೇಸ್ ಮತ್ತಿತರ ಆಧುನಿಕ ತಂತ್ರಜ್ಞಾನಗಳನ್ನು ಬಳಿ ಎಐ ಸ್ವಯಂ ಚಾಲಿತ ವಿದ್ಯುತ್ ವಾಹನವನ್ನು ಅಭಿವೃದ್ಧಿ ಪಡಿಸಲಾಗಿದೆ.
ಪೂರ್ವ ನಿರ್ಧರಿತ ಮಾರ್ಗದಲ್ಲಿ ಅಡೆತಡೆಗಳನ್ನು ಗುರುತಿಸಿ ಸುರಕ್ಷಿತವಾಗಿ ಸಂಚರಿಸುವ ಮಟ್ಟ ಈ ವಾಹನಕ್ಕಿದ್ದು, ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆಗಳನ್ನು ಕೂಡಾ ಅಳವಡಿಸಲಾಗಿದೆ.
5 ಕಿಲೋ ವ್ಯಾಟ್ ಸಾಮರ್ಥ್ಯದ ಲೀಥಿಯಂ ಐಯಾನ್ ಬ್ಯಾಟರಿಯಿಂದ ಕಾರ್ಯನಿರ್ವಹಿಸುವ ಈ ವಾಹನ ಸುಮಾರು ಎರಡು ಗಂಟೆಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 20 ಕಿ.ಮೀ ಸಂಚರಿಸಬಲ್ಲದು. ಗರಿಷ್ಠ ಗಂಟೆಗೆ 28 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಈ ವಾಹನದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಬ್ಯಾಟರಿಯನ್ನು ಬದಲಾಯಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಇದೊಂದು ನಮ್ಮ ಅಳಿಲು ಸೇವೆ ಎಂದು ಹೇಳುತ್ತಾರೆ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಎ ಶ್ರೀನಿವಾಸ ರಾವ್.
ಸಂಸ್ಥೆಯ ಆಡಳಿತ ಕಾಲೇಜಿನ ಕ್ಯಾಂಪಸ್‌ನಲ್ಲಿ ಓಡಾಡುವ ಪ್ರಾಜೆಕ್ಟನ್ನು ನಮಗೆ ನೀಡಿದ್ದರು. ಈ ಟಾಸ್ಕನ್ನು ನಾವು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಇದು ಮ್ಯಾಪ್ ಆಧಾರಿತ ಅಂದರೆ ಪೂರ್ವ ನಿರ್ಧರಿತ ಮಾರ್ಗದಲ್ಲಿ ಸಂಪೂರ್ಣ ಸ್ವಯಂಚಾಲಿತವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ವಾಹನವಾಗಿದೆ ಎಂದು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಅಸಿಸ್ಟೆಂಟ್ ಪ್ರೊಫೆಸರ್ ವಿಶ್ವಾಸ್ ಶೆಟ್ಟಿ ಮಾಹಿತಿ ನೀಡಿದರು.
ಈ ವಾಹನದ ಜೊತೆಗೆ ವಿಶ್ವವಿದ್ಯಾಲಯಕ್ಕಾಗಿ ವಿಶೇಷವಾಗಿ ಅಭಿವೃದ್ಧಿ ಪಡಿಸಿರುವ ಶ್ರೀನಿ ಬೋಟ್ ಎಐ ಆಧಾರಿತ ರಿಸೆಪ್ಶನ್ ಬೋಟ್ ಕೂಡಾ ಎಲ್ಲರ ಗಮನ ಸೆಳೆಯುತ್ತಿದೆ. ಸಂದರ್ಶಕರನ್ನು ಸ್ವಾಗತಿಸುವುದು, ಧ್ವನಿ ಸಂವಾದದ ಮೂಲಕ ಮಾಹಿತಿ ನೀಡುವುದು, ಬಹುಭಾಷಾ ಬೆಂಬಲ, ಮುಖ ಗುರುತಿಸುವಿಕೆ ಹಾಗೂ ಟಚ್ ಸ್ಕ್ರೀನ್ ಸೇವೆ ಸೇರಿದಂತೆ ಹಲವು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಈ ರೋಬೋಟ್ ಹೊಂದಿದೆ.
ಕಾರ್ಯಕ್ರಮದಲ್ಲಿ ಉಪಕುಲಪತಿ ಡಾ.ಸತ್ಯನಾರಾಯಣ ರೆಡ್ಡಿ, ಕುಲಸಚಿವರಾದ ಡಾ.ಅನಿಲ್ ಕುಮಾರ್, ಅಭಿವೃದ್ಧಿ ವಿಭಾಗದ ಕುಲಸಚಿವ ಅಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.




