ಸೋಮವಾರ, 26 ಅಕ್ಟೋಬರ್ 2026
Trending

ಶಿಬಾಜೆ: ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಮರ, ಸವಾರ ಅದೃಷ್ಟವಶಾತ್ ಪಾರು

ಅರಸಿನಮಕ್ಕಿ, ಜು.24: ಅರಸಿನಮಕ್ಕಿ-ಶಿಶಿಲ ರಸ್ತೆಯ ಬರ್ಗುಳ ಸಮೀಪ ಶುಕ್ರವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆ ಬೈಕ್‌ ಮೇಲೆ ಏಕಾಏಕಿ ಮರವೊಂದು ಬಿದ್ದ ಘಟನೆ ನಡೆದಿದೆ. ಶಿಶಿಲ ದೇನೋಡಿ ನಿವಾಸಿ ರತೀಶ್‌ ಪೂಜಾರಿ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯ ಮರ ಹಠಾತ್ತನೆ ಬೈಕ್‌ ಮೇಲೆ ಬಿದ್ದಿದೆ.

Sponsored

ಪರಿಣಾಮ ಬೈಕ್‌ಗೆ ಹಾನಿಯಾಗಿದೆ. ರತೀಶ್‌ ಪೂಜಾರಿ ಅವರು ಯಾವುದೇ ಗಂಭೀರ ಗಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ ಮರವನ್ನು ತೆರವು ಮಾಡಿ ಸಂಚಾರವನ್ನು ಸುಗಮಗೊಳಿಸಲಾಯಿತು.

ಘಟನಾ ಸ್ಥಳಕ್ಕೆ ಪಂಚಾಯತ್‌ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಮೆಸ್ಕಾಂ ಪವರ್‌ ಮ್ಯಾನ್‌ ಸಂತೋಷ್‌ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು.