ಬುಧವಾರ, 28 ಅಕ್ಟೋಬರ್ 2026
Trending

ಮದುವೆಗೂ ಮುನ್ನ ಹುಡುಗನನ್ನು ಟೇಸ್ಟ್ ಮಾಡಿ, ರುಚಿ ಕಂಡ್ರೆ ಮದುವೆ ಆಗಿ ಅಂದಿದ್ಯಾರು, ಅಂದಿದ್ಯಾಕೆ ?

ನಟಿಯೊಬ್ಬಳು ಹೊಸ ಅಣಿಮುತ್ತು ಉದುರಿಸಿದ್ದಾಳೆ. ಟ್ರಯಲ್ ನೋಡಿದ ನಂತರ ಯಾವುದೇ ವಸ್ತುವನ್ನು ನಾವು ಕೊಳ್ಳುವಂತೆ ಹುಡುಗನನ್ನು ಟೇಸ್ಟ್ ಮಾಡಿ. ರುಚಿ ನೋಡಿದ ಮೇಲೆ ನಿಮ್ಮ ಟೆಸ್ಟ್ ನಲ್ಲಿ ಆತ ಪಾಸಾದರೆ ಆತನನ್ನು ಮದುವೆಯಾಗಿ. ಇಲ್ಲದಿದ್ದರೆ ಬೇಡ ಹೀಗೆಂದು ಹೇಳಿದ್ದಾಳೆ ನಟಿ ಶ್ರೀ ರಾಪಾಕ (Shree Rapaka).

ನಟಿಯೊಬ್ಬಳು ಹೊಸ ಅಣಿಮುತ್ತು ಉದುರಿಸಿದ್ದಾಳೆ. ಟ್ರಯಲ್ ನೋಡಿದ ನಂತರ ಯಾವುದೇ ವಸ್ತುವನ್ನು ನಾವು ಕೊಳ್ಳುವಂತೆ ಹುಡುಗನನ್ನು ಟೇಸ್ಟ್ ಮಾಡಿ. ರುಚಿ ನೋಡಿದ ಮೇಲೆ ನಿಮ್ಮ ಟೆಸ್ಟ್ ನಲ್ಲಿ ಆತ ಪಾಸಾದರೆ ಆತನನ್ನು ಮದುವೆಯಾಗಿ. ಇಲ್ಲದಿದ್ದರೆ ಬೇಡ ಹೀಗೆಂದು ಹೇಳಿದ್ದಾಳೆ ನಟಿ ಶ್ರೀ ರಾಪಾಕ (Shree Rapaka).

Sponsored

ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಯಸ್ಕರ ಸಿನಿಮಾದಲ್ಲಿ ನಟಿಸುವ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಶ್ರೀ ರಾಪಕಾ (Shree Rapaka) ಇದೀಗ ವಾಹಿನಿಯೊಂದರ ಸಂದರ್ಶನದಲ್ಲಿ ನಾಲಿಗೆ ಹರಿಬಿಟ್ಟಿರುವ ಶ್ರೀ ರಾಪಕಾ, ತಮ್ಮ ಗೆಳತಿಯ ಜೀವನದಲ್ಲಿ ನಡೆದಿರುವ ಘಟನೆಯನ್ನು ಉದಾಹರಣೆಗೆ ತೆಗೆದುಕೊಂಡು ಸಾರ್ವಜನಿಕವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೀಗ ಪರ ಮತ್ತು ವಿರೋಧದ ಚರ್ಚೆಗೆ ಕಾರಣವಾಗಿದೆ. ಶ್ರೀ ರಾಪಕಾ ಬಗ್ಗೆ ಸಹಜವಾಗಿ ನೆಗೆಟಿವ್ ಕಾಮೆಂಟ್ ಗಳ ಮಹಾಪೂರ ಬರುತ್ತಿದೆ.

Advertisement
Advertisement

ಮದುವೆಗೆ ಮುಂಚೆ ಸೆಕ್ಸ್ ಬೇಕು ಅಂದ ನಟಿ:
ಮದುವೆಯ ಮುನ್ನ ಸೆಕ್ಸ್ ಮಾಡುವುದು ತಪ್ಪು ಅಲ್ಲ ಎಂದಿರುವ ಈ ನಟಿ, ‘ನಿಮ್ಮ ಭಾವಿ ಪತಿಯ ಜೊತೆ ದಯವಿಟ್ಟು ಸೆಕ್ಸ್ ಮಾಡಿ, ಅವನು ಗಂಡು ಹೌದೋ ಅಥವಾ ಅಲ್ಲವೋ ಎನ್ನುವುದನ್ನು ಟೆಸ್ಟ್ ಮಾಡಿ’ ಎಂದಿದ್ದಾಳೆ. ಈ ಮಾತುಗಳು ಸಖತ್ ವೈರಲ್ ಕೂಡ ಆಗಿವೆ. ಈಕೆ ನಟಿ ಈ ರೀತಿ ಹೇಳಲು ಕೂಡ ಕಾರಣ ಇದೆ.
ಶ್ರೀ ರಾಪಕಳ ಸ್ನೇಹಿತೆಯೊಬ್ಬಳು ವೈದ್ಯರೊಬ್ಬರನ್ನು ಮದುವೆಯಾಗಿದ್ದರು. ಆಕೆ ಸಹಜವಾಗಿ ಎಲ್ಲಾ ಮದುಮಗಳ ರೀತಿಯಲ್ಲಿ ತುಂಬಾ ಕನಸು ಕಟ್ಟಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟಿದ್ದರಂತೆ. ಆದರೆ, ಫಸ್ಟ್ ನೈಟ್ ದಿನ ಅವನ ಗುಟ್ಟು ರಟ್ಟು ಆಗಿತ್ತು. ಆತ ಸಲಿಂಗಿ ಎಂದು ಗೊತ್ತಾಗಿ, ಅವಳ ಕನಸಿನ ಸೌಧವೇ ಮುರಿದು ಬಿದ್ದಿತ್ತು ಎಂದು ನಟಿ ಹೇಳಿಕೊಂಡಿದ್ದಾರೆ. ಹಾಗಾಗಿ ಮದುವೆಯ ಮುನ್ನ ಸೆಕ್ಸ್ ಮಾಡಿ, ಗಂಡನ್ನ ಟೆಸ್ಟ್ ಮಾಡಿ ಎಂದಿದ್ದಾರೆ ನಟಿ. ಟೇಸ್ಟ್ ಮಾಡಿ ನಂತರ ಆರ್ಡರ್ ಮಾಡಿ ರೀತಿಯ ಸಲಹೆ ನೀಡಿದ್ದಾಳೆ ಈ ನಟಿ.

ಶ್ರೀ ರಾಪಕಾಳ ಗೆಳತಿಯ ಬದುಕಿನಲ್ಲಿ ನಡೆದದ್ದು, ಎಲ್ಲರಿಗೂ ನಡೆಯಲ್ಲ. ಟೇಸ್ಟ್ ಮಾಡಿ ಬಳಸಲು ಇದು ಹಳಸಿದ ಅಡುಗೆಯೇ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಜವಾಬ್ದಾರಿಯುತ ಮಾತನಾಡಿ ಎಂದೂ ಹಲವರು ಸಲಹೆ ನೀಡಿದ್ದಾರೆ.

Advertisement