ಸೋಮವಾರ, 26 ಅಕ್ಟೋಬರ್ 2026
Trending

ಯಾರೋ ಫಾಲೋ ಮಾಡ್ತಾರೆ, ಪ್ಲೀಸ್ ಕಾಪಾಡಿ – ವಿದೇಶದಲ್ಲಿ ಕ್ರಿಕೆಟ್ ಆಡುತ್ತಿದ್ದ ಭಾರತೀಯ ಹುಡುಗರಿಗೆ ಸಹಾಯ ಬೇಡಿದ ಯುವತಿ!!

ಕೆನಡಾದದಲ್ಲಿ ಮೈದಾನವೊಂದರಲ್ಲಿ ಕ್ರಿಕೆಟ್ ಆಡುತ್ತಿದ್ದ ಭಾರತೀಯ ಹುಡುಗರ ಬಳಿ ಅಲ್ಲಿನ ಸ್ಥಳಿಯ ಯುವತಿ ಒಬ್ಬಳು ಬಂದು ಯಾರೋ ಫಾಲೋ ಮಾಡ್ತಾ ಇದ್ದಾರೆ, ಪ್ಲೀಸ್ ಸಹಾಯ ಮಾಡಿ ಎಂದು ಬೇಡಿಕೊಂಡಿದ್ದಾಳೆ. ಆಗ ಯುವಕರು ಮಾಡಿದ ಕೆಲಸ ಎಲ್ಲೆಡೆ ಸುದ್ದಿಯಾಗಿದೆ.

Sponsored

ಹೌದು, ಯುವತಿಯೊಬ್ಬರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಪುರುಷರ ಗುಂಪಿನ ಬಳಿಗೆ ಓಡಿಬಂದು ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಹೇಳಿ ಸಹಾಯ ಕೋರುತ್ತಾರೆ. ತಕ್ಷಣವೇ ಅವಳನ್ನು ತಮ್ಮ ಬೆನ್ನ ಹಿಂದೆ ನಿಲ್ಲಿಸಿಕೊಂಡು ಆಟಗಾರರು ರಕ್ಷಣೆ ನೀಡುತ್ತಾರೆ. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಆಗಿದೆ

Advertisement
Advertisement

 ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವೇ ಕ್ಷಣಗಳಲ್ಲಿ, ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತ ಬಿಳಿಯ ವ್ಯಕ್ತಿಯೊಬ್ಬ ಮೈದಾನ ಪ್ರವೇಶಿಸಿ ನೇರವಾಗಿ ಮಹಿಳೆಯ ಕಡೆಗೆ ಹೆಜ್ಜೆ ಇಡುತ್ತಿರುವುದು ದೃಶ್ಯದಲ್ಲಿ ಕಂಡುಬರುತ್ತದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಭಾರತೀಯ ಕ್ರಿಕೆಟಿಗರು ತಕ್ಷಣವೇ ಆ ವ್ಯಕ್ತಿಯನ್ನು ಎದುರಿಸಿ, ಅವನ ಮತ್ತು ಮಹಿಳೆಯ ನಡುವೆ ಭದ್ರವಾದ ಗೋಡೆಯಂತೆ ನಿಲ್ಲುತ್ತಾರೆ. ಬಳಿಕ ಗದರಿಸಿ ಆತನನ್ನು ಅಲ್ಲಿಂದ ಕಳುಹಿಸುತ್ತಾರೆ. ಆದರೆ ಆ ವಿದೇಶಿ ವ್ಯಕ್ತಿ ಯಾಕೆ ಆ ಯುವತಿಯನ್ನು ಫಾಲೋ ಮಾಡಿಕೊಂಡು ಬಂದ ಎಂಬುದು ತಿಳಿದಿಲ್ಲ.

https://www.instagram.com/reel/DZRn9q9TeuT/?igsh=MjF4anVyNGMydzlq

Advertisement