ಬಿಸಿ ರೋಡ್ನಲ್ಲಿ ನಡೆದ ಲಾವಣ್ಯ ಕೊಲೆ ಪ್ರಕರಣ ಇಡೀ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಅಘಾತಕಾರಿ ದೃಶ್ಯಗಳು ವೈರಲಾಗುತ್ತಿವೆ. ಇದೀಗ ಚೇತನ್, ಲಾವಣ್ಯವನ್ನು ತಾನು ಹೇಗೆ ಕೊಲ್ಲುತ್ತೇನೆ ಎಂದು ಮಾತನಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ ನ @anjirudresh ಎಂಬ ಪೇಜ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಕೊಲೆಗಾರ ಚೇತನ್ ಈ ಹಿಂದೆ ಮಾತನಾಡಿದ್ದ ಹಳೆಯ ವಿಡಿಯೋ ತುಣುಕನ್ನು ನೋಡಬಹುದು. ಅದರಲ್ಲಿ “ತಲೆಯ ಹಿಂದೆ ಒಂದೇ ಏಟು ಬಲವಾಗಿ ಹೊಡೆದರೆ ಮುಗಿಯಿತು ಫಿನಿಷ್” ಎಂದು ಆತ ಈ ಕ್ರೂರವಾಗಿ ಹೇಳೋದನ್ನು ಕಾಣಬಹುದು. ಈ ವಿಡಿಯೋ ಇದೀಗ ಲಾವಣ್ಯ ಹತ್ಯೆಯ ಬೆನ್ನಲ್ಲೇ ಭಾರಿ ಸದ್ದು ಮಾಡುತ್ತಿದ್ದು ಆತ ಮೊದಲೇ ಈ ಕೊಲೆಗೆ ಸಂಚು ರೂಪಿಸಿದ್ದನೇ ಎಂಬ ಆತಂಕಕಾರಿ ಅನುಮಾನವನ್ನು ಹುಟ್ಟುಹಾಕಿದೆ.
ತಾನು ಈ ಹಿಂದೆ ಆಡಿದ ಕ್ರೂರ ಮಾತುಗಳಂತೆಯೇ ಅಮಾಯಕ ಹೆಣ್ಣುಮಗಳು ಲಾವಣ್ಯಳನ್ನು ಅಟ್ಟಾಡಿಸಿಕೊಂಡು ಲಾಂಗ್ನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಆ ಪಾಪಿಯ ಕ್ರೌರ್ಯಕ್ಕೆ ಇಡೀ ನಾಡಿನಾದ್ಯಂತ ಜನಾಕ್ರೋಶ ಧಗಧಗಿಸುತ್ತಿದೆ. ಪ್ರೀತಿಯ ಹೆಸರಿನಲ್ಲಿ ಇಂತಹ ಭಯಾನಕ ಕೃತ್ಯ ಎಸಗಿದ ಹಂತಕ ಚೇತನ್ಗೆ ಕಾನೂನಿನ ಅಡಿಯಲ್ಲಿ ಯಾವುದೇ ದಯೆ ತೋರದೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರ ಒತ್ತಾಯದ ಕೂಗು ಗಟ್ಟಿಯಾಗುತ್ತಿದೆ
https://www.instagram.com/reel/Da6orWAkW9V/?igsh=b2NhMTdzNHphcnR0




