ಸೋಮವಾರ, 26 ಅಕ್ಟೋಬರ್ 2026
Trending

ಎಸ್.ಡಿ.ಎಂ ಪಪೂ ಕಾಲೇಜು ಉಜಿರೆ : ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿ

ಉಜಿರೆ,ದಿ.ಜು.02 : ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್(IISER) ಇವರು ಜೂನ್ ತಿಂಗಳಿನಲ್ಲಿ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಹರಿಕೃಷ್ಣ ಇವರು ರಾಷ್ಟ್ರ ಮಟ್ಟದಲ್ಲಿ 1327ರಾಂಕ್ ಅನ್ನು ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

Sponsored

ಹರಿಕೃಷ್ಣ ಅವರ ಅಧ್ಬುತ ಸಾಧನೆಯಿಂದ ನಮ್ಮ ಕಾಲೇಜಿನ ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿ ಸೇರಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳು ಎಂದರೆ ಕೇವಲ CET ಅಥವಾ NEET ಮಾತ್ರ ಎಂಬ ಭ್ರಮೆಯನ್ನು ತಳ್ಳಿಹಾಕಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೂ ಉನ್ನತ ಶಿಕ್ಷಣದ ಅವಕಾಶಗಳನ್ನು ಪಡೆದುಕೊಳ್ಳಬಹುದು. ಈ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿದೆ ಎಂದು ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ ತಿಳಿಸಿದರು.

Advertisement

ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾದ ನಂತರ ನನಗೆ ಹಲವು ಅವಕಾಶಗಳು ದೊರೆತವು. ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ವಿದ್ಯಾಭ್ಯಾಸ ನೀಡುತ್ತಿರುವುದು ಸಂಸ್ಥೆಯ ವಿಶೇಷ. ವಿದ್ಯಾರ್ಥಿ ವೇತನದ ಮೂಲಕ ಓದಲು ಉತ್ಸಾಹ ಇರುವ ಹಲವಾರು ಬಡ ಕುಟುಂಬದ ಮಕ್ಕಳಿಗೆ ಆರ್ಥಿಕ ನೆರವು ಮತ್ತು ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಇಲ್ಲಿ ಕಲಿಸಿದ ಸಂಸ್ಕಾರ ಜೀವನ ನನಗೆ ಶಿಸ್ತು ಮತ್ತು ಏಕಾಗ್ರತೆಯನ್ನು ಬೆಳೆಸಿದೆ. ಈ ಸಾಧನೆಯ ಹಿಂದೆ ಸಂಸ್ಥೆಯ ಉಪನ್ಯಾಸಕರ ನಿರಂತರ ಸಹಕಾರ ಮತ್ತು ಪೋಷಕರ ಪ್ರೋತ್ಸಾಹವಿದ್ದು ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದು ವಿದ್ಯಾರ್ಥಿ ಹರಿಕೃಷ್ಣ ಅಭಿಪ್ರಾಯ ಪಟ್ಟರು.

ಇವರ ರಾಷ್ಟ್ರ ಮಟ್ಟದ ಸಾಧನೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ವೃಂದ ಅಭಿನಂದಿಸಿರುತ್ತಾರೆ.

ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗೆಳನ್ನು ಸಂಯೋಜಿಸಲು ಮತ್ತು ಉತ್ತೇಜಿಸಲು ಭಾರತ ಸರಕಾರವು ಬೆರ್ಹಾಂಪುರ, ಭೋಪಾಲ್, ಕೊಲ್ಕತಾ, ಮೊಹಾಲಿ, ಪುಣೆ, ತಿರುವನಂತಪುರಂ ಮತ್ತು ತಿರುಪತಿ ಗಳಲ್ಲಿ ಐಐಎಸ್‌ಇಆರ್‌ಗಳನ್ನು ಸ್ಥಾಪಿಸಿದೆ. ವಿಜ್ಞಾನ ವಿಷಯದ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಈ ಸಂಸ್ಥೆಗಳ ಪ್ರವೇಶಕ್ಕೆ ಈ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ ತಿಳಿಸಿದ್ದಾರೆ.

ವಿಜ್ಞಾನದಲ್ಲಿ ಸಂಶೋಧನೆಯ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರಗಳನ್ನು ಆವಿಷ್ಕರಿಸುವ ಮತ್ತು ಅನುಷ್ಠಾನಗೊಳಿಸುವ ಮೂಲಕ ರಾಷ್ಟ್ರವನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಅನುವುಮಾಡಿಕೊಡು ವುದು ಐಐಎಸ್‌ಇಆರ್‌ನ ಪ್ರಮುಖ ಗುರಿ ಯಾಗಿದೆ. ಅಲ್ಪಾವಧಿಯಲ್ಲಿಯೇ ಐಐಎಸ್ ಇಆರ್‌ನ ಹಲವು ಸಂಶೋಧನೆಗಳು ಪ್ರಕಟಗೊಂಡಿದ್ದು, ಪೇಟೆಂಟ್‌ಗಳ ರೂಪದಲ್ಲಿ ಬೌದ್ಧಿಕ ಆಸ್ತಿಯನ್ನು ಸೃಷ್ಟಿಸಿವೆ.