ಶನಿವಾರ, 24 ಅಕ್ಟೋಬರ್ 2026

ಒಳಉಡುಪು ಹೂತು ಫೋಟೋ ಕಳಿಸಿ ಎಂದ ವಿಜ್ಞಾನಿಗಳು – ಕಾರಣ ಕೇಳಿದ್ರೆ ಅಚ್ಚರಿ ಆಗುತ್ತೆ!!

ವಿಜ್ಞಾನಿಗಳ ತಂಡ ಒಂದು ಸಂಶೋಧನೆಯ ದೃಷ್ಟಿಯಿಂದಾಗಿ  ನಿಮ್ಮ ಒಳಉಡುಪುಗಳನ್ನು ಮಣ್ಣಿನಲ್ಲಿ ಹೂತು ಫೋಟೋ ಕಳುಹಿಸಿ ಎಂದು ವಿಚಿತ್ರವಾದ ಮನವಿಯನ್ನು ಮಾಡಿದ್ದಾರೆ. ಹಿನ್ನೆಲೆಯಲ್ಲಿ ಬರೋಬ್ಬರಿ 1000 ಮಂದಿ ತಮ್ಮ ಒಳಉಡುಪುಗಳನ್ನು ಹೊತ್ತು ವಿಜ್ಞಾನಿಗಳಿಗೆ ಫೋಟೋವನ್ನು ಕಳುಹಿಸಿದ್ದಾರೆ. ಯಾಕೆ ಈ ಸಂಶೋಧನೆ ಎಂದು ಗೊತ್ತಾದರೆ ನಿಮಗೂ ಕೂಡ ಅಚ್ಚರಿಯಾಗುತ್ತೆ.

ಸ್ವಿಟ್ಜರ್‌ಲ್ಯಾಂಡ್‌ನ ವಿಜ್ಞಾನಿಗಳ ತಂಡ ಈ ಪ್ರಯೋಗ ಹಾಗೂ ಸಂಶೋಧನೆ ಮಾಡಿದೆ. ಈ ಪ್ರಯೋಗದ ಮುಖ್ಯ ಉದ್ದೇಶ ಮಣ್ಣಿನ ಆರೋಗ್ಯ ಪರೀಕ್ಷಿಸುವುದು. ಜೈವಿಕ ವೈವಿದ್ಯತೆಯಲ್ಲಿ ಎದುರಾಗಿರುವ ಆತಂಕಕ್ಕೆ ಕಾರಣ ಹಾಗೂ ಜನರಿಗೆ ಅರ್ಥವಾಗುವಂತೆ ತಿಳಿ ಹೇಳಲು ಈ ಪ್ರಯೋಗ ನಡೆಸಲಾಗಿತ್ತು. 

ಜ್ಯೂರಿಚ್ ವಿಶ್ವವಿದ್ಯಾಲಯ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಕೃಷಿ ಸಂಶೋಧನಾ ಕೇಂದ್ರ ಅಗ್ರೋಸ್ಕೋಪ್‌ನ ಸಂಶೋಧಕರು ಪ್ರೂಫ್ ಬೈ ಅಂಡರ್‌ಪ್ಯಾಂಟ್ಸ್  ಒಂದು ವಿಶಿಷ್ಟ ಸಂಶೋಧನೆಯನ್ನು ಕೈಗೊಂಡಿದ್ದರು. ವಿಜ್ಞಾನಿಗಳ ಮಾರ್ಗದರ್ಶನದಂತೆ ಸ್ವಿಟ್ಜರ್‌ಲೆಂಡ್‌ನ ಸುಮಾರು 1000 ಸ್ಥಳಗಳಲ್ಲಿ 2000ಕ್ಕೂ ಹೆಚ್ಚು ಒಳ ಉಡುಪುಗಳು, 12000 ಟೀ ಚೀಲಗಳನ್ನು ಹೂತಿದ್ದಾರೆ. ಎರಡು ತಿಂಗಳ ಬಳಿಕ ಅವುಗಳನ್ನು ತೆಗೆದು ಫೋಟೋ ಹಾಗೂ ಮಣ್ಣಿನ ಜೊತೆ ವಿಜ್ಞಾನಿಗಳಿಗೆ ಕಳುಹಿಸಿದ್ದಾರೆ. ವಿಜ್ಞಾನಿಗಳ ಈ ಪ್ರಯೋಗದ ಮಾದರಿಯನ್ನು ಅಧ್ಯಯನ ಮಾಡಿದ್ದಾರೆ. ಈ ಯೋಜನೆಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಫೋಟೋ ಕಳುಸಿದ ಈ ವೇಳೆ ಕೆಲ ಒಳ ಉಡುಪುಗಳು ಭೂಮಿಯಲ್ಲಿ ಕರಗದೆ ಹಾಗೇ ಉಳಿದಿತ್ತು. ಮತ್ತೆ ಕೆಲವು ಅರ್ಧದಷ್ಟು ಕರಗಿತ್ತು. ಭೂಮಿಯಡಿಯಲ್ಲಿ ಎಷ್ಟು ಜೈವಿಕ ಚಟುವಟಿಕೆ ನಡೆಯುತ್ತಿದೆ ಎಂಬುದರ ಪತ್ತೆ ಹಚ್ಚುವುದು ಇದರ ಉದ್ದೇಶವಾಗಿತ್ತು. ಮಣ್ಣಿನ ಜೀವಿಗಳು ಹೆಚ್ಚು ಸಕ್ರಿಯವಾಗಿದ್ದಾಗ, ಅವು ಹತ್ತಿಯನ್ನು ಹೆಚ್ಚು ವೇಗವಾಗಿ ಕರಗಿಸುತ್ತವೆ. ಆದರೆ ಈಗ ಭೂಮಿಯಲ್ಲಿ ಸೇರುತ್ತಿರುವ ಪ್ಲಾಸ್ಟಿಕ್, ಬಟ್ಟೆ ಸೇರಿದಂತೆ ಹಲವು ವಸ್ತುಗಳಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಕೃಷಿ ಸೇರಿದಂತೆ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಈ ಸಂಶೋಧನೆಯಿಂದಾಗಿ ಇದೀಗ ಮಣ್ಣು ಜೀವ ಕಳೆದುಕೊಳ್ಳುತ್ತಿದೆ. ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಮಣ್ಣು ನಿರ್ಜೀವ ವಸ್ತುವಾಗಲಿದೆ. ಇದರಿಂದ ಭೂಮಿ ಮೇಲಿನ ಎಲ್ಲವೂ ನಾಶವಾಗುವ ಸಾಧ್ಯತೆ ಇದೆ ಎಂಬುದು ಬಯಲಾಗಿದೆ.