ಭಾನುವಾರ, 25 ಅಕ್ಟೋಬರ್ 2026
Trending

2026-27ರ ಆರ್‌ಟಿಇ ಪ್ರವೇಶಕ್ಕೆ ವೇಳಾಪಟ್ಟಿ ಪ್ರಕಟ

RTE Admission 2023
Image source: Aglasem Schools

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 2026-27 ನೇ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಉಚಿತ ಸೀಟುಗಳ ಹಂಚಿಕೆಗೆ ನಿಗದಿಪಡಿಸಿದ್ದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಮತ್ತೊಮ್ಮೆ ಪರಿಷ್ಕರಿಸಿ ಎ.9 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

Sponsored

ಎ.7 ಹಾಗೂ ಎ.8 ರಂದು ಆನ್‌ಲೈನ್‌ನಲ್ಲಿ ಪ್ರಯೋಗಾರ್ಥ ಅರ್ಜಿ ಸಲ್ಲಿಕೆ, ಎ.9 ರಿಂದ ಮೇ 7 ರವರೆಗೆ ನೈಜ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಇರಲಿದೆ ಎಂದು ತಿಳಿಸಲಾಗಿದೆ. ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಒಂದನೇ ತರಗತಿಯಲ್ಲಿ ಲಭ್ಯವಿರುವ ಶೇ.25 ರಷ್ಟು ಆರ್‌ಟಿಸಿ ಸೀಟುಗಳನ್ನು ಎ.6 ರಂದು ಪ್ರಕಟ ಮಾಡಲಾಗುವುದು.

ಮೇ.12 ರಂದು ಲಾಟರಿ ಪ್ರಕ್ರಿಯೆ ಮೂಲಕ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಮೇ 16 ರಂದು ಆನ್‌ಲೈನ್‌ ಲಾಟರಿ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆಯಾಗಲಿದೆ. ಸೀಟು ಪಡೆದವರು ಜೂ.1 ರೊಳಗೆ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡಬೇಕು. ಜೂ.5 ರಂದು ಎರಡನೇ ಸುತ್ತಿನ ಸೀಟು ಹಂಚಿಕೆಯಾಗಲಿದೆ. ಜೂ.15 ರವರೆಗೆ ಆಯಾ ಶಾಲೆಗಳಿಗೆ ದಾಖಲಾಗುವಂತೆ ತಿಳಿಸಲಾಗಿದೆ.