ಸೋಮವಾರ, 26 ಅಕ್ಟೋಬರ್ 2026
Trending

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ ಮೊದಲ CEO ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ನೇಮಕ

Advertisement

1999ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ನಡೆದ ಆಪರೇಷನ್‌ ಸಫೇದ್‌ ಸಾಗರ್‌ನ ಹೀರೋ, 2025ರಲ್ಲಿ ನಡೆದ ಆಪರೇಷನ್‌ ಸಿಂದೂರ್‌ ಸಮಯದಲ್ಲಿ ವೆಸ್ಟರ್ನ್‌ ಏರ್‌ ಕಮಾಂಡ್‌ ಮುನ್ನಡೆಸಿದ್ದ ನಿವೃತ್ತ ಏರ್‌ ಮಾರ್ಷಲ್‌ ಜಿತೇಂದ್ರ ಮಿಶ್ರಾ ರಾಮ ಮಂದಿರದ ಮೊಟ್ಟಮೊದಲ ಸಿಇಒ ಆಗಿ ನೇಮಕವಾಗಿದ್ದಾರೆ.

Sponsored

ದೇವಾಲಯದ ಕಾಣಿಕೆ ಹಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಮತ್ತು ಕಳ್ಳತನದ ಆರೋಪಗಳ ವಿವಾದದ ನಡುವೆ ಬುಧವಾರ ನಡೆದ ಟ್ರಸ್ಟ್‌ನ ನಿರ್ಣಾಯಕ ಸಭೆಯಲ್ಲಿ ಈ ನೇಮಕಾತಿ ಆದೇಶವನ್ನು ಅಧಿಕೃತವಾಗಿ ಹೊರಡಿಸಲಾಗಿದೆ. ಈ ಅತ್ಯುನ್ನತ ಮತ್ತು ಜವಾಬ್ದಾರಿಯುತ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದ ಬರೋಬ್ಬರಿ 5,000ಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳ ಪಟ್ಟಿಯಿಂದ ಜೀತೇಂದ್ರ ಮಿಶ್ರಾ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ.

Advertisement
Advertisement

ಟ್ರಸ್ಟ್‌ಗೆ ಮೂವರು ನೂತನ ಸದಸ್ಯರ ನೇಮಕ

ಶ್ರೀರಾಮಮಂದಿರ ಟ್ರಸ್ಟ್‌ಗೆ ದೆಹಲಿ ಮೂಲದ ಮಹೇಶ್ ಭಾಗ್‌ಚಂದ್ ಹಾಗೂ ಅಯೋಧ್ಯೆಯ ಸ್ಥಳೀಯ ನಿವಾಸಿಗಳಾದ ಮದನ್ ಮೋಹನ್ ಪಾಂಡೆ ಮತ್ತು ನಿರ್ಮಲಾ ಯಾದವ್ ಅವರನ್ನು ನೂತನ ಸದಸ್ಯರನ್ನಾಗಿ ನೇಮಿಸಲಾಗಿದೆ. ಇವರಲ್ಲಿ ಮಹೇಶ್ ಭಾಗ್‌ಚಂದ್ ಅವರು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹಿರಿಯ ದಿವಂಗತ ನಾಯಕ ಅಶೋಕ್ ಸಿಂಘಾಲ್ ಅವರ ಆಪ್ತ ಸಂಬಂಧಿಯಾಗಿದ್ದಾರೆ. ಈ ಮೂವರ ಸೇರ್ಪಡೆಯಿಂದ ಟ್ರಸ್ಟ್‌ನ ಕಾರ್ಯವ್ಯಾಪ್ತಿಗೆ ಮತ್ತಷ್ಟು ಬಲ ಬಂದಂತಾಗಿದೆ

ಜೀತೇಂದ್ರ ಮಿಶ್ರಾ ಯಾರು?

ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರು ಭಾರತೀಯ ವಾಯುಪಡೆಯ ನಿವೃತ್ತ ಹಿರಿಯ ಅಧಿಕಾರಿಯಾಗಿದ್ದು, ವಾಯುಪಡೆಯ ಪಶ್ಚಿಮ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದಾರೆ.

ಸುಮಾರು 38 ವರ್ಷಗಳಿಗೂ ಅಧಿಕ ಅವಧಿಯ ವೃತ್ತಿ ಜೀವನದಲ್ಲಿ ಇವರು ವಾಯುಪಡೆಯಲ್ಲಿ ಹಲವು ಪ್ರಮುಖ ಆಡಳಿತ ಮತ್ತು ಕಮಾಂಡ್ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇವುಗಳಲ್ಲಿ ಫೈಟರ್ ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್, ಏರ್‌ಕ್ರಾಫ್ಟ್ & ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್‌ನ (ASTE) ಮುಖ್ಯ ಪರೀಕ್ಷಾ ಪೈಲಟ್ (Chief Test Pilot), ಎರಡು ವಾಯುನೆಲೆಗಳ ಏರ್ ಆಫೀಸರ್ ಕಮಾಂಡಿಂಗ್, ವಾಯುನೆಲೆ ಕಚೇರಿಯ ನಿರ್ದೇಶಕ, ಪ್ರಿನ್ಸಿಪಾಲ್ ಡೈರೆಕ್ಟರ್ (ASR) ಹಾಗೂ ಸಹಾಯಕ ವಾಯುಪಡೆ ಮುಖ್ಯಸ್ಥ (ಯೋಜನೆಗಳು), ASTE ಕಮಾಂಡೆಂಟ್ ಮತ್ತು ಇಂಟಿಗ್ರೇಟೆಡ್‌ ಡಿಫೆನ್ಸ್‌ ಸ್ಟಾಫ್‌ ಉಪಮುಖ್ಯಸ್ಥ ಮುಂತಾದ ಜವಾಬ್ದಾರಿಗಳನ್ನು ನಿರ್ವಹಸಿದ್ದಾರೆ. 

ವಿಶೇಷವಾಗಿ, ಭಾರತೀಯ ಸಶಸ್ತ್ರ ಪಡೆಗಳ ಪ್ರಮುಖ ಸಮರ ಕಾರ್ಯಾಚರಣೆಯಾದ ‘ಆಪರೇಷನ್ ಸಿಂಧೂರ್’ (Operation Sindoor) ಸಮಯದಲ್ಲಿ ಅವರು ವಾಯುಪಡೆಯ ಅತ್ಯಂತ ನಿರ್ಣಾಯಕ ‘ವೆಸ್ಟರ್ನ್ ಕಮಾಂಡ್’ನ (Western Command) ಮುಖ್ಯಸ್ಥರಾಗಿ ಯಶಸ್ವಿ ಸಾರಥ್ಯ ವಹಿಸಿದ್ದರು. ಅಯೋಧ್ಯೆಯ ಭವ್ಯ ರಾಮಮಂದಿರದ ಸಂಕೀರ್ಣ, ಮೂಲಸೌಕರ್ಯ, ಭಕ್ತಾದಿಗಳ ನಿರ್ವಹಣೆ ಹಾಗೂ ಟ್ರಸ್ಟ್‌ನ ಬೃಹತ್ ಯೋಜನೆಗಳನ್ನು ಅತ್ಯಂತ ದಕ್ಷತೆ ಮತ್ತು ಶಿಸ್ತಿನಿಂದ ಮುನ್ನಡೆಸಲು ವಾಯುಪಡೆಯ ಹಿರಿಯ ಅಧಿಕಾರಿಯ ಸೇವಾ ಅನುಭವ ಮತ್ತು ಆಡಳಿತಾತ್ಮಕ ಪಟುತ್ವವು ಯೋಗ್ಯವಾಗಿದೆ ಎಂದು ಪರಿಗಣಿಸಿ ಟ್ರಸ್ಟ್ ಈ ಮಹತ್ವದ ನಿರ್ಧಾರ ತಳೆದಿದೆ. ಈ ಪ್ರಸ್ತುತ ಹುದ್ದೆಯನ್ನು ವಹಿಸಿಕೊಳ್ಳುವುದಕ್ಕೂ ಮುನ್ನ ಅವರು ಸಂಯೋಜಿತ ರಕ್ಷಣಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

Advertisement
div class="ere-sticky">