ಸೋಮವಾರ, 26 ಅಕ್ಟೋಬರ್ 2026
Trending

RCB: ಒಂದೇ ಮ್ಯಾಚ್‌ ನಲ್ಲಿ ಹಲವು ದಾಖಲೆ ನುಚ್ಚುನೂರು ಮಾಡಿದ RCB ಬಾಯ್ಸ್!!

RCB: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಿಮ್ ಡೇವಿಡ್, ಫಿಲ್‌ ಸಾಲ್ಟ್‌, ದೇವದತ್ ಪಡಿಕ್ಕಲ್ ಮತ್ತು ನಾಯಕ ರಜತ್ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ RCB ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 3 ವಿಕೆಟ್‌ಗೆ 250 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಇದರೊಂದಿಗೆ ಇದುವರೆಗೂ ಇದ್ದ ಹಲವು ದಾಖಲೆಗಳನ್ನು ಮುರಿದಿದೆ.

Sponsored

ಯಸ್, ಕಳೆದ 18 ವರ್ಷಗಳಲ್ಲಿ ಸಿಎಸ್​ಕೆ ವಿರುದ್ಧ ಯಾವುದೇ ತಂಡ 235 ಕ್ಕಿಂತ ಹೆಚ್ಚಿನ ಸ್ಕೋರ್​ ಗಳಿಸಲು ಸಾಧ್ಯವಾಗಿರಲಿಲ್ಲ. 2014 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ 2024 ರಲ್ಲಿ ಗುಜರಾತ್ ಟೈಟಾನ್ಸ್ ತಂಡವು 231 ರನ್​ಗಳಿಸಿದ್ದು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ ಆರ್​ಸಿಬಿ ದಾಂಡಿಗರು ಸಿಎಸ್​ಕೆ ತಂಡದ ಎಲ್ಲಾ ಲೆಕ್ಕಾಚಾರಗಳನ್ನ ತಲೆ ಕೆಳಗಾಗಿಸಿದರು. 20 ಓವರ್​​ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್​ಗಳನ್ನ ಚೆಂಡಾಡುವ ಮೂಲಕ ಬರೋಬ್ಬರಿ 250 ರನ್​ ಚಚ್ಚಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 5 ಬಾರಿಯ ಚಾಂಪಿಯನ್ ಸಿಎಸ್​ಕೆ ವಿರುದ್ಧ 250 ರನ್​ ಕಲೆಹಾಕಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ 36 ಬಾರಿ 200+ ರನ್‌ ಗಳಿಸಿ, ಸಿಎಸ್‌ಕೆ ದಾಖಲೆಯನ್ನ ಸರಿಗಟ್ಟಿದ್ದು ಮತ್ತೊಂದು ವಿಶೇಷ.

Advertisement

ಕೊನೆಯ ಓವರ್‌ನಲ್ಲಂತೂ ಟಿಮ್‌ ಡೇವಿಡ್ ಅವರು, ಜೇಮೀ ಓವರ್ಟನ್ ಅವರ ಬೌಲಿಂಗ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ವಿಶೇಷ ಎಂದರೆ ಇದರಲ್ಲಿ ಹ್ಯಾಟ್ರಿಕ್ ಸಿಕ್ಸರ್‌ ಕೂಡ ಇದೆ. ಸ್ಫೋಟಕ ಬ್ಯಾಟಿಂಗ್‌ ಮಾಡಿದ ಟಿಮ್‌ ಡೇವಿಡ್‌ ಅವರು ಕೇವಲ 21 ಎಸೆತಗಳಲ್ಲಿ ಎರಡು ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳೊಂದಿಗೆ ಅರ್ಧಶತಕ ಗಳಿಸಿದರು. ಪಂದ್ಯದಲ್ಲಿ ಕೇವಲ 25 ಎಸೆತಗಳನ್ನು ಎದುರಿಸಿದ ಟಿಮ್‌ ಡೇವಿಡ್‌, 3 ಬೌಂಡರಿ ಹಾಗೂ 8 ಬ್ಯೂಟಿಫುಲ್‌ ಸಿಕ್ಸರ್‌ಗಳಿಂದ 70 ರನ್‌ಗಳನ್ನು ಚಚ್ಚಿದರು.