ಸೋಮವಾರ, 26 ಅಕ್ಟೋಬರ್ 2026
Trending

ಬೆಂಗಳೂರು:ಆನೇಕಲ್ ನಲ್ಲಿ ಯುವಕ ಯುವತಿಯರಿಂದ ರೇವ್ ಪಾರ್ಟಿ!!ನಶೆಯ ಅಮಲಿನಲ್ಲಿ ಅರೆಬೆತ್ತಲೆ ನೃತ್ಯ |ಪೊಲೀಸರ ದಾಳಿ, ಹಲವರ ಬಂಧನ

ಬೆಂಗಳೂರು:ಆನೇಕಲ್ ಹೊರವಲಯದ ನಿರ್ಜನ ಪ್ರದೇಶದ ರೆಸಾರ್ಟ್ ಒಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಯೊಂದಕ್ಕೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು,ಈ ಸಂದರ್ಭ ಯುವಕ ಯುವತಿಯರು ನಶೆಯ ಅಮಲಿನಲ್ಲಿ ಅರೆನಗ್ನ ಸ್ಥಿತಿಯಲ್ಲಿರುವುದು ಕಂಡುಬಂದಿದ್ದು, ಡ್ರಗ್ಸ್ ಸೇವಿಸಿ ಅರೆಬೆತ್ತಲೆಯಾಗಿ ಕುಣಿಯುತ್ತಿದ್ದ ಸುಮಾರು 11 ಮಂದಿಯನ್ನು ಬಂಧಿಸಲಾಗಿದ್ದು,6ಕಾರು ಹಾಗೂ 15 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

Sponsored

ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರೂ ವಿದ್ಯಾರ್ಥಿಗಳೆಂಬ ಮಾಹಿತಿ ಇದ್ದು, ಪಾರ್ಟಿ ನಡೆಸುವಾಗ ಹಲವು ಯುವಕ ಯುವತಿಯರು ಡ್ರಗ್ಸ್ ಸೇವನೆಯನ್ನು ಮಾಡಿದ್ದರು ಎಂದು ತಿಳಿದುಬಂದಿದ್ದು,ಅದಲ್ಲದೇ ಪೊಲೀಸರು ದಾಳಿ ನಡೆಸುವಾಗ ಕೆಲ ಯುವಕ ಯುವತಿಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement
Advertisement
Advertisement