ಶನಿವಾರ, 24 ಅಕ್ಟೋಬರ್ 2026

Raichur:ವೈದ್ಯರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು

Raichur: ರಾಯಚೂರಿನ ಬೆಟ್ಟದೂರು ಆಸ್ಪತ್ರೆಯ ಮುಖ್ಯವೈದ್ಯರಾದ ಡಾ. ಜಯಪ್ರಕಾಶ್ ಪಾಟೀಲ್ (Raichur Bettadur Hospital Chief Physician Dr. Jayaprakash Patil)ಬೆಟ್ಟದೂರು ಅವರ ಕಾರಿನ ಮೇಲೆ ಗುರುವಾರ ಆಗಸ್ಟ್ ( 31) ರಂದು ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಇಂದು ಅಪರಾಹ್ನದ ವೇಳೆಗೆ ರಾಯಚೂರು ಹೊರ ವಲಯದ ಸಾತ್ ಮೈಲ್ ಸಮೀಪ ಅಪರಿಚಿತರಿಂದ ಈ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದ್ದು, ಡಾ.ಜಯಪ್ರಕಾಶ್ ಪಾಟೀಲ್ ಅವರು  ದಾಳಿಯಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.

ದ್ವಿಚಕ್ರವಾಹನದಲ್ಲಿ ಬಂದ ಕಿಡಿಗೇಡಿಗಳು ಇದಕ್ಕಿದ್ದಂತೆ ವೈದ್ಯರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಅಪರಿಚಿತರು ಯಾರೋ ವೈದ್ಯರಿಗೆ ಕರೆಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದು, ಅವರಿಗೆ ವೈದ್ಯರು ಹಣ ನೀಡದೆ ಇರುವ ಹಿನ್ನೆಲೆ ಈ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ರಾಯಚೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಎಸ್ ಪಿ ಮತ್ತು ಪೋಲೀಸರು ಭೇಟಿ ನೀಡಿ ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ