ರಾಹುಲ್ ಗಾಂಧಿಗೆ 56ನೇ ಹುಟ್ಟುಹಬ್ಬ ಸಂಭ್ರಮ – ದೇಶದ ಗಮನಸೆಳೆದ ಪ್ರಧಾನಿ ಮೋದಿ ವಿಶ್!!
ಕಾಂಗ್ರೆಸ್ ನೇತಾರ ಯುವ ನಾಯಕ ರಾಹುಲ್ ಗಾಂಧಿಯವರಿಗೆ ಇಂದು 56ನೇ ಹುಟ್ಟುಹಬ್ಬದ ಸಂಭ್ರಮ. ರಾಹುಲ್ ಗಾಂಧಿಯವರಿಗೆ ನರೇಂದ್ರ ಮೋದಿಯವರು ವಿಶೇಷವಾಗಿ ಶುಭಕೋರಿದ್ದು, ಅದು ದೇಶದ ಗಮನ ಸೆಳೆದಿದೆ.
Sponsoredಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ರಾಹುಲ್ ಗಾಂಧಿಯವರಿಗೆ ಶುಭಹಾರೈಸಿದ್ದು, ರಾಹುಲ್ ಗಾಂಧಿ ಅವರಿಗೆ ದೇವರು ಉತ್ತಮ ಆರೋಗ್ಯ ಮತ್ತು ಸುದೀರ್ಘ ಆಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ. ರಾಜಕೀಯದ ವಿರೋಧಗಳ ನಡುವೆಯೂ ಪ್ರಧಾನಿ ಮೋದಿಯವರು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರಾಹುಲ್ ಗಾಂಧಿಯವರಿಗೆ ವಿಶ್ ಮಾಡಿರುವುದು ದೇಶದ ಗಮನ ಸೆಳೆದಿದೆ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹುಟ್ಟುಹಬ್ಬದ ಶುಭ ಕೋರಿದ್ದು, ಸಂವಿಧಾನದ ಆದರ್ಶಗಳಿಗೆ ನಿಮ್ಮ ಸಮರ್ಪಣೆ ಮತ್ತು ರಾಜಿಯಿಲ್ಲದ ಹೋರಾಟ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ ಎಂದು ತಿಳಿಸಿದ್ದಾರೆ.




