ಶುಕ್ರವಾರ, 6 ನವೆಂಬರ್ 2026

ಇಲಿ ಹಿಡಿಯಲು ಹೋಗಿ ಕಾರು ಒಳಗೆ ಲಾಕ್ ಆದ ಹಾವು

Advertisement
Advertisement

ಇಲಿ ಹಿಡಿಯಲು ಹೋದ ಹಾವೊಂದು ಕಾರಿನ ಇಂಜಿನ್ ಅಡಿಭಾಗದ ರಂಧ್ರದಲ್ಲಿ ಸಿಲುಕಿಕೊಂಡ ಅಪರೂಪದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ.

Sponsored

ಪುತ್ತೂರು ನಗರದ ನಿವಾಸಿಯೊಬ್ಬರು ತಮ್ಮ ಕಾರನ್ನು ಎಂದಿನಂತೆ ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಕಾರಿನ ಬಳಿ ಬಂದ ಇಲಿಯನ್ನು ಬೆನ್ನಟ್ಟಿದ ಹಾವೊಂದು, ಕಾರಿನ ಅಡಿಭಾಗದಲ್ಲಿದ್ದ ಸಣ್ಣ ರಂಧ್ರದ ಮೂಲಕ ಒಳನುಗ್ಗಿದೆ. ಒಳಗೆ ನುಗ್ಗಿ ಇಲಿಯನ್ನು ಹಿಡಿದ ಹಾವಿಗೆ, ತಿಂದ ಬಳಿಕ ಮೈ ದಪ್ಪಗಾದ ಕಾರಣ ಅದೇ ರಂಧ್ರದಿಂದ ಮರಳಿ ಹೊರಬರಲು ಸಾಧ್ಯವಾಗಿಲ್ಲ.ಈ ಯಾವುದೇ ವಿಚಾರ ತಿಳಿಯದ ಕಾರಿನ ಮಾಲೀಕರು, ಎಂದಿನಂತೆ ಕಾರನ್ನು ಚಲಾಯಿಸಿಕೊಂಡು ಪುತ್ತೂರು ಪೇಟೆಗೆ ಬಂದಿದ್ದಾರೆ.

Advertisement
Advertisement

ಪೇಟೆಯಲ್ಲಿ ಕಾರನ್ನು ಪಾರ್ಕ್ ಮಾಡಿದಾಗ, ಕಾರಿನ ಅಡಿಭಾಗದಲ್ಲಿ ಹಾವಿನ ಚಲನವಲನ ಇರುವುದನ್ನು ಸ್ಥಳೀಯರೊಬ್ಬರು ಗಮನಿಸಿ ಮಾಲೀಕರಿಗೆ ತಿಳಿಸಿದ್ದಾರೆ. ತಕ್ಷಣವೇ ಸಾರ್ವಜನಿಕರು ಸೇರಿ ಹಾವನ್ನು ಹೊರಗೆ ಎಳೆಯಲು ಪ್ರಯತ್ನಿಸಿದರೂ, ಅದು ರಂಧ್ರದಲ್ಲಿ ಗಟ್ಟಿಯಾಗಿ ಸಿಲುಕಿಕೊಂಡಿದ್ದರಿಂದ ಹೊರಬರಲು ಸಾಧ್ಯವಾಗಲಿಲ್ಲ.

Advertisement

ಕೊನೆಗೆ ಸ್ಥಳಕ್ಕೆ ಆಗಮಿಸಿದ ಉರಗತಜ್ಞರು ಕಾರಿನ ಅಡಿಭಾಗದ ಬಿಡಿಭಾಗಗಳನ್ನು ಗಮನಿಸಿ, ಹಾವಿಗೆ ಯಾವುದೇ ಗಾಯವಾಗದಂತೆ ಅತ್ಯಂತ ಜಾಗರೂಕತೆಯಿಂದ ಹಾಗೂ ಹರಸಾಹಸ ಪಟ್ಟು ಹಾವನ್ನು ಸುರಕ್ಷಿತವಾಗಿ ಹೊರಗೆ ತೆಗೆದಿದ್ದಾರೆ. 

Advertisement
Advertisement