Home » ಮದುವೆಯಾಗುವುದಾಗಿ ಯುವತಿಗೆ ಮಗು ಕರುಣಿಸಿ ಮೋಸ – ಇಬ್ಬರಿಗೂ ಮದುವೆ ಮಾಡಿಸಿದ ಪೊಲೀಸರು

ಮದುವೆಯಾಗುವುದಾಗಿ ಯುವತಿಗೆ ಮಗು ಕರುಣಿಸಿ ಮೋಸ – ಇಬ್ಬರಿಗೂ ಮದುವೆ ಮಾಡಿಸಿದ ಪೊಲೀಸರು

0 comments

ಯುವಕನೊಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಮಗು ಕರುಣಿಸಿ ಕೈಕೊಟ್ಟಿದ್ದ. ಇದೀಗ ಪೊಲೀಸರು ಸೇರಿ ಇವರಿಬ್ಬರಿಗೂ ಮದುವೆ ಮಾಡಿದ ಘಟನೆ ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಡೆದಿದೆ.

ಬೀರಕನಹಳ್ಳಿ ಗ್ರಾಮದ ರಾಜು, ಅನ್ನಪೂರ್ಣ ಎಂಬಾ ಯುವತಿಯನ್ನು ನಂಬಿಸಿ ಆಕೆಯನ್ನು ಗರ್ಭವತಿಯನ್ನಾಗಿಸಿದ್ದಾನೆ.  ರಾಜು ಮತ್ತು ನಿಲುವಾಗಿಲು ಗ್ರಾಮದ ಅನ್ನಪೂರ್ಣ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ವರ್ಷ ಇಬ್ಬರೂ ಒಟ್ಟಿಗಿದ್ದರು. ಮದುವೆಯಾಗುವುದಾಗಿ ರಾಜು ಅನ್ನಪೂರ್ಣಗೆ ಭರವಸೆ ನೀಡಿದ್ದ. ಈ ನಡುವೆ ಅನ್ನಪೂರ್ಣ ಗರ್ಭಿಣಿಯಾಗಿ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಜನಿಸಿದ ಬಳಿಕ ರಾಜು ಮದುವೆಯಾಗದೇ ಎಸ್ಕೇಪ್ ಆಗಿದ್ದ. 

ಮನನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದರು. ತಲೆಮರೆಸಿಕೊಂಡಿದ್ದ ಆರೋಪಿ ರಾಜುನನ್ನು ಪೊಲೀಸರು ಹುಡುಕಿ ಠಾಣೆಗೆ ಕರೆತಂದಿದ್ದಾರೆ. ಯುವಕನಿಗೆ ಪೊಲೀಸರು ಮತ್ತು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡರು ಸೇರಿ ಬುದ್ಧಿವಾದ ಹೇಳಿದ್ದಾರೆ. ರ್ರಾಜು ಹಾಗೂ ಅನ್ನಪೂರ್ಣ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.

You may also like