ಭಾರತದಲ್ಲಿ ಮೆಹಂದಿಗೆ ತನ್ನದೇ ಆದ ಮಹತ್ವ ಇದ್ದು, ಇದು ಇಲ್ಲಿನ ಮದುವೆ, ಹಬ್ಬ, ಕಾರ್ಯಕ್ರಮ, ಶುಭ ಸಮಾರಂಭದ ಪ್ರಮುಖ ಭಾಗವಾಗಿದೆ. ಆದರೀಗ US ನಲ್ಲಿ ಎಂಜಿನಿಯರ್ವೊಬ್ಬರು ಈ ಕಲೆಯನ್ನು ಪಾರ್ಟ್ ಟೈಂ ಜಾಬ್ ಆಗಿ ರೂಢಿಸಿಕೊಂಡಿದ್ದು, ದಿನಕ್ಕೆ ಲಕ್ಷ ಲಕ್ಷ ಗಳಿಕೆ ಮಾಡುತ್ತಿದ್ದಾರೆ.


ಹೌದು, ಅಮೆರಿಕದಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಎಂಜಿನಿಯರ್ ಪ್ರಿಯಾಂಕ ಜೈನ್ ತಮ್ಮ ಕೆಲಸದ ಬಿಡುವಿನಲ್ಲಿ ಮೆಹೆಂದಿ ಹಾಕಿ, ತಮ್ಮ ಈ ಕಲೆಯಿಂದಾಗಿ ಸಾಕಷ್ಟು ಹಣ ಗಳಿಕೆ ಮಾಡುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಅವರೇ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ.
ಒಂದು ಗಂಟೆ ಹಾಕುವ ಮೆಹಂದಿಗೆ $100 ಶುಲ್ಕ ವಿಧಿಸಲಾಗುತ್ತದೆ. ಭಾರತೀಯ ರೂಪಾಯಿಗಳಲ್ಲಿ ನಾನು ಗಂಟೆಗೆ 9,000 ರಿಂದ 10,000 ರೂ. ದುಡಿಯುತ್ತೇನೆ. ಮದುವೆ ಸಮಾರಂಭಕ್ಕಾಗಿ ಮೆಹಂದಿ ಹಾಕಲು ಬುಕ್ ಆದರೆ, 10 ಗಂಟೆಗಳ ಇದೇ ಕೆಲಸ ಮಾಡಿದರೆ ನಾನು ಒಂದು ದಿನದಲ್ಲಿ ಸುಮಾರು 1 ಲಕ್ಷ ರೂ. ($1,200+) ಗಳಿಸಬಹುದು ಎಂದು ಅವರು ಹೇಳಿದ್ದಾರೆ.
ಅಲ್ಲದೆ ಗೌರವ ಇದೆ. ನಮ್ಮಲ್ಲಿ ಮೆಹಂದಿ ಹಾಕುವ ಕಲೆ ಗೊತ್ತಿರುವವರನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಳ್ಳೋದಿಲ್ಲ. ಗೌರವಿಸೋದಿಲ್ಲ. ಆದರೆ ಇಲ್ಲಿ ನನ್ನನ್ನು ಒಬ್ಬ ಕಲಾವಿದೆಯಾಗಿ ನೋಡಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.

