ಸೋಮವಾರ, 26 ಅಕ್ಟೋಬರ್ 2026
Trending

ಪ್ರತಿಷ್ಠಿತ ‘ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್, ಡಿಗ್ರಿ ಕಮಾಂಡರ್ ಗ್ರಾಂಡ್ ಕ್ರಾಸ್’ ಗೌರವಕ್ಕೆ ಭಾಜನರಾದ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸ್ವೀಡನ್‌ನ ಪ್ರತಿಷ್ಠಿತ ‘ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್, ಡಿಗ್ರಿ ಕಮಾಂಡರ್ ಗ್ರಾಂಡ್ ಕ್ರಾಸ್’ ಗೌರವಕ್ಕೆ ಭಾಜನರಾಗಿದ್ದಾರೆ.

Sponsored

ಗೋಥೆನ್‌ಬರ್ಗ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸ್ವೀಡನ್‌ನ ಪ್ರಧಾನಿ ಉಲ್ಫ್ ಕ್ರಿಸ್ಟರ್‌ಸನ್ ಅವರ ಉಪಸ್ಥಿತಿಯಲ್ಲಿ, ಸ್ವೀಡನ್‌ನ ಯುವರಾಣಿ (ಕ್ರೌನ್ ಪ್ರಿನ್ಸೆಸ್) ವಿಕ್ಟೋರಿಯಾ ಅವರು ಪ್ರಧಾನಿ ಮೋದಿ ಅವರಿಗೆ ಈ ಗೌರವವನ್ನು ಅಧಿಕೃತವಾಗಿ ಪ್ರದಾನ ಮಾಡಿದರು.

Advertisement
Advertisement

ಇದು ವಿದೇಶಿ ಸರ್ಕಾರಿ ಮುಖ್ಯಸ್ಥರಿಗೆ ಸ್ವೀಡನ್ ನೀಡಬಹುದಾದ ಅತ್ಯುನ್ನತ ಗೌರವವಾಗಿದೆ.

ಈ ನಿರ್ದಿಷ್ಟ ಮನ್ನಣೆಯನ್ನು ಪಡೆದ ಮೊದಲ ಏಷ್ಯಾದ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.

​ ಈ ಪ್ರಶಸ್ತಿಯು ವಿದೇಶಿ ಸರ್ಕಾರಗಳು ಮತ್ತು ಜಾಗತಿಕ ಸಂಸ್ಥೆಗಳಿಂದ ಪ್ರಧಾನಿ ಮೋದಿ ಅವರಿಗೆ ನೀಡಲಾದ 31ನೇ ಅಂತರರಾಷ್ಟ್ರೀಯ ಗೌರವವಾಗಿದೆ

Advertisement