ಸೋಮವಾರ, 26 ಅಕ್ಟೋಬರ್ 2026
Trending

ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಟ್ಯಾಂಕ್‌ಗೆ ಬಿದ್ದು ಬಾಲಕಿ ಸಾವು

ಆಟವಾಡುತ್ತಿದ್ದ ಏಳು ವರ್ಷದ ಬಾಲಕಿ ನೀರಿನ ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಇಂದ್ರಾವತಿ ಎಸ್ಟೇಟ್ ನಲ್ಲಿ ನಡೆದಿದೆ.

Sponsored

ಕೂವೆ ಇಂದ್ರಾವತಿ ಎಸ್ಟೇಟ್ ನಿವಾಸಿ ಗೀತಾ-ಶೇಷಪ್ಪ ದಂಪತಿಯ ಪುತ್ರಿ ಪ್ರಾರ್ಥನಾ ಎಂಬ ಬಾಲಕಿಯೇ ಮೃತಪಟ್ಟ ನತದೃಷ್ಟೆ.

ಘಟನೆ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ